Sunday, September 20, 2026

BDA Apartments

ಮೈಸೂರು ಜಿಪಂ ವರ್ಗಾವಣೆ ಆದೇಶ ರದ್ದು ಮಾಡುವಂತೆ ಒತ್ತಾಯಿಸಿ ನಾಳೆ ಪಿಡಿಒಗಳ ಸ...
Home Front Page ಮೈಸೂರು ಜಿಪಂ ವರ್ಗಾವಣೆ ಆದೇಶ ರದ್ದು ಮಾಡುವಂತೆ ಒತ್ತಾಯಿಸಿ ನಾಳೆ ಪಿಡಿಒಗಳ ಸಂಘದಿಂದ ಮೌನ ಪ್ರತಿಭಟನೆ

ಮೈಸೂರು ಜಿಪಂ ವರ್ಗಾವಣೆ ಆದೇಶ ರದ್ದು ಮಾಡುವಂತೆ ಒತ್ತಾಯಿಸಿ ನಾಳೆ ಪಿಡಿಒಗಳ ಸಂಘದಿಂದ ಮೌನ ಪ್ರತಿಭಟನೆ

ಮೈಸೂರು, ಆಗಸ್ಟ್ 23, 2020 (www.justkannada.in): ಟಿಎಚ್ ಒ ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಪಂ ಸಿಇಓ ಪ್ರಶಾಂತ್ ಕುಮಾರ್ ಮಿಶ್ರಾ ವರ್ಗಾವಣೆ ರದ್ದು ಪಡಿಸುವಂತೆ ಪಿಡಿಓ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಾಯಪ್ಪ ಒತ್ತಾಯಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಪ್ರಶಾಂತ್ ಕುಮಾರ್ ಮಿಶ್ರಾರನ್ನ ಮೈಸೂರು ಸಿಇಓ ಆಗಿಯೇ ಮುಂದುವರೆಸುವಂತೆ ಒತ್ತಾಯಿಸಿದ್ದಾರೆ.

ನಾಳೆ ಸಾವಿರಕ್ಕೂ ಹೆಚ್ಚು ಸಿಬ್ಬಂದಿಯಿಂದ ಮೌನ ಪ್ರತಿಭಟನೆ ನಡೆಸಿ ಪ್ರಾದೇಶಿಕ ಆಯುಕ್ತರಿಗೆ ಮನವಿ ನೀಡುತ್ತೇವೆ. ಇದಕ್ಕಾಗಿ ಇಂದು ಪೊಲೀಸ್ ಆಯುಕ್ತರ ಬಳಿ ಅನುಮತಿಗೆ ಬಂದಿದ್ದೇವೆ‌ ಎಂದು ಸೂರಿನಲ್ಲಿ ಪಿಡಿಓ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಾಯಪ್ಪ ಹೇಳಿದ್ದಾರೆ.

ಮೊದಲು ಸಮಗ್ರವಾದ ತನಿಖೆಯಾಗಲಿ. ನಂತರ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲಿ. ಏಕಾಏಕಿ ಸಿಇಓ ಮೇಲೆ ಕ್ರಮ ಸರಿಯಲ್ಲ. ತಪಿತಸ್ಥರಿಗೆ ಶಿಕ್ಷೆಯಾಗಲಿ’ ಆದರೆ ಆರೋಪ ಸಾಬೀತಿಗು ಮುನ್ನ ಕ್ರಮ ಸರಿಯಲ್ಲ ಎಂದು ಜಿಪಂ ಸಿಇಓ ಮಿಶ್ರಾ ಪರ ಜಿಲ್ಲಾ ಪಿಡಿಓ ಸಂಘ ಮಾತನಾಡಿದೆ.