Saturday, September 19, 2026

BDA Apartments

ಕಾಡುಗಳ್ಳ ವೀರಪ್ಪನ್ ಸಹಚರ ಬಿಲವೇಂದ್ರನ್ ಸಾವು… BDA JK_Adv BDA Adv
Home Crime ಕಾಡುಗಳ್ಳ ವೀರಪ್ಪನ್ ಸಹಚರ ಬಿಲವೇಂದ್ರನ್  ಸಾವು….

ಕಾಡುಗಳ್ಳ ವೀರಪ್ಪನ್ ಸಹಚರ ಬಿಲವೇಂದ್ರನ್  ಸಾವು….

ಮೈಸೂರು,ಆ,20,2020(www.justkannada.in): ಕಾಡುಗಳ್ಳ ವೀರಪ್ಪನ್ ಸಹಚರ ಹಾಗೂ ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಕೈದಿಯಾಗಿದ್ದ ಬಿಲವೇಂದ್ರನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.jk-logo-justkannada-logo

ಮೈಸೂರಿನ ಕೇಂದ್ರ ಕಾರಾಗೃಹದ ಕೈದಿ ವೀರಪ್ಪನ್ ಸಹಚರ ಬಿಲವೇಂದ್ರನ್ ಕೆ.ಆರ್. ಆಸ್ಪತ್ರೆಯಲ್ಲಿ ತಡರಾತ್ರಿ ಮೃತಪಟ್ಟಿದ್ದಾನೆ. ಮಲೆಮಹದೇಶ್ವರ ಸಮೀಪದ ಮಾರ್ಟಳ್ಳಿಯವನಾದ ಈತ ಕಳೆದ 25 ವರ್ಷಗಳಿಂದಲೂ ಇಲ್ಲಿನ ಕಾರಾಗೃಹದಲ್ಲಿ ಬಂಧಿತ‌ನಾಗಿದ್ದ.

ಹತ್ತು ದಿನಗಳ ಹಿಂದೆ ಜೈಲಿನಲ್ಲಿ  ಪ್ರಜ್ಞಾಶೂನ್ಯನಾಗಿದ್ದ ಈತನನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ನರಸಂಬಂಧಿ ಸಮಸ್ಯೆಗಳಿಂದಾಗಿ ಈತ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.mysore-Veerappan- associate- Bilavendran- death

ಚಾಮರಾಜನಗರ ಜಿಲ್ಲೆಯ ಗಡಿಭಾಗದ ಪಾಲಾರ್ ಸಮೀಪದ ಸೋರೆಕಾಯಿಮಡುವು ಬಳಿ ನೆಲಬಾಂಬ್ ಸ್ಪೋಟಿಸಿ 22  ಮಂದಿ ಸಾವಿಗೆ ಕಾರಣರಾಗಿ ಮರಣದಂಡನೆ ಶಿಕ್ಷೆಗೆ ಬಿಲವೇಂದ್ರನ್ ಗುರಿಯಾಗಿದ್ದನು. ಈತನ ಶಿಕ್ಷೆಯ ಪ್ರಮಾಣವನ್ನು ನಂತರ‌ ಜೀವಾವಧಿ‌‌‌ ಶಿಕ್ಷೆಗೆ ಪರಿವರ್ತಿಸಲಾಗಿತ್ತು.

Key words:  mysore-Veerappan- associate- Bilavendran- death