Wednesday, September 30, 2026

BDA Apartments

ರಾಮಮಂದಿರಕ್ಕೆ ಶಂಕು ಸ್ಥಾಪನೆ: ಮೋದಿಗೆ ಕರ್ನಾಟಕದಿಂದ‌ ಕೋದಂಡರಾಮನ ಗಿಫ್ಟ್ B...
Home Front Page ರಾಮಮಂದಿರಕ್ಕೆ ಶಂಕು ಸ್ಥಾಪನೆ: ಮೋದಿಗೆ ಕರ್ನಾಟಕದಿಂದ‌ ಕೋದಂಡರಾಮನ  ಗಿಫ್ಟ್

ರಾಮಮಂದಿರಕ್ಕೆ ಶಂಕು ಸ್ಥಾಪನೆ: ಮೋದಿಗೆ ಕರ್ನಾಟಕದಿಂದ‌ ಕೋದಂಡರಾಮನ  ಗಿಫ್ಟ್

ಮೈಸೂರು, ಆಗಸ್ಟ್ 02, 2020 (www.justkannada.in): ಆ.5ಕ್ಕೆ ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಶಂಕು ಸ್ಥಾಪನೆ ಮೋದಿಗೆ ಕರ್ನಾಟಕದಿಂದ‌ ಕೋದಂಡರಾಮನ  ಗಿಫ್ಟ್ ನೀಡಲಾಗಿದೆ.

ಬೆಂಗಳೂರಿನ ಕಲಾವಿದ ರಾಮಮೂರ್ತಿ‌ ಅವ್ರಿಂದ ಕೆತ್ತನೆಯ ವಿಗ್ರಹ ಗಿಫ್ಟ್ ಮಾಡಿದ್ದಾರೆ. ಈ ಸಂಬಂಧ ಮೈಸೂರಿನಲ್ಲಿ ಶಾಸಕ ರಾಮದಾಸ್‌ರಿಂದ ಮಾಹಿತಿ ನೀಡಿದ್ದಾರೆ.

ರಾಮಮೂರ್ತಿ ಅವ್ರು ನಿರ್ಮಾಣ ಮಾಡಿದ ವಿಗ್ರಹಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಅವರಿಂದ ನಿರ್ಮಾಣವಾದ ಹೊಸ ವಿನ್ಯಾಸದ ವಿಗ್ರಹ ಮೋದಿ ಅವ್ರಿಗೆ ನೀಡಲಾಗುತ್ತಿದೆ. ಈಗಾಗಲೇ ಅದು ಅಯೋಧ್ಯೆ ತಲುಪಿದೆ.

ಆ.5ರಂದು ಅದನ್ನ ಪ್ರಧಾನಿ ಮೋದಿ ಅವ್ರಿಗೆ ತಲುಪಿಸುತ್ತೇವೆ. ಕೆಂಗೇರಿಯ ಆಶ್ರಮವೊಂದರಲ್ಲಿ ನಿರ್ಮಾಣವಾದ ವಿಗ್ರಹ ಅದು.  ಆ ಅಪರೂಪದ ವಿಗ್ರಹ ಮೋದಿ ಅವ್ರಿಗೆ ನೀಡುತ್ತೇವೆ. ಶ್ರೀರಾಮ ಸಹಿತ, ಸೀತಾಮಾತೆ’ ಲಕ್ಷ್ಮಣ ಕೂಡ ಇರುವಂತ ವಿಗ್ರಹ ಅದು ಎಂದು ಮೈಸೂರಿನಲ್ಲಿ ಶಾಸಕ ರಾಮದಾಸ್‌ರಿಂದ ಮಾಹಿತಿ ನೀಡಿದ್ದಾರೆ.