Saturday, September 19, 2026

BDA Apartments

ಕೊರೋನಾ ವಿಚಾರ: ಸಿಎಂ ಬಿಎಸ್ ವೈಗೆ ‘ಕೈ’ ಶಾಸಕ ಜಮೀರ್ ಅಹ್ಮದ್ ಖಾನ್ ಪತ್ರ… BDA JK_Ad...
Home Front Page ಕೊರೋನಾ ವಿಚಾರ: ಸಿಎಂ ಬಿಎಸ್ ವೈಗೆ ‘ಕೈ’ ಶಾಸಕ ಜಮೀರ್ ಅಹ್ಮದ್ ಖಾನ್ ಪತ್ರ…

ಕೊರೋನಾ ವಿಚಾರ: ಸಿಎಂ ಬಿಎಸ್ ವೈಗೆ ‘ಕೈ’ ಶಾಸಕ ಜಮೀರ್ ಅಹ್ಮದ್ ಖಾನ್ ಪತ್ರ…

ಬೆಂಗಳೂರು,ಜು,20,2020(www.justkannada.in): ದಿನೇ ದಿನೇ ಕೊರೋನಾ ಹೆಚ್ಚುತ್ತಿದ್ದು ಜತೆಗೆ ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿದೆ. ಹೀಗಾಗಿ ಮೃತ ಸೋಂಕಿತರ ಅಂತ್ಯಕ್ರಿಯೆಗೆ ಸೂಕ್ತ ವ್ಯವಸ್ಥೆ ಮಾಡಿ ಎಂದು ಸಿಎಂ ಬಿಎಸ್ ಯಡಿಯೂರಪ್ಪಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಪತ್ರ ಬರೆದು ಆಗ್ರಹಿಸಿದ್ದಾರೆ.jk-logo-justkannada-logo

ಈ ಕುರಿತು ಸಿಎಂ ಬಿಎಸ್ ವೈಗೆ ಪತ್ರ ಬರೆದಿರುವ ಶಾಸಕ ಜಮೀರ್ ಅಹ್ಮದ್ ಖಾನ್,  ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಜತೆಗೆ ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿದೆ. ಆದರೆ ಮೃತ ಸೋಂಕಿತರ ಅಂತ್ಯಕ್ರಿಯೆಗೆ ಸರ್ಕಾರ  ವ್ಯವಸ್ಥೆ ಮಾಡಿಲ್ಲ. ಹೀಗಾಗಿ ವಿದ್ಯುತ್ ಚಿತಾಗಾರದಲ್ಲಿ ಕ್ಯೂ ನಿಲ್ಲುವ ಪರಿಸ್ಥಿತಿ ಎದುರಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.corona-letter-mla-jameer-ahmed-khan-cm-bs-yeddyurappa

ಹೀಗಾಗಿ ಸೋಂಕಿತರ ಅಂತ್ಯಕ್ರಿಯೆಗೆ ಸೂಕ್ತ ವ್ಯವಸ್ಥೆ ಮಾಡಿ. ಶವಸಂಸ್ಕಾರಕ್ಕೆ  ಜಾಗ ಹಸ್ತಾಂತರ ಮಾಡಿ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಸಿಎಂ ಬಿಎಸ್ ವೈಗೆ ಆಗ್ರಹಿಸಿದ್ದಾರೆ.

Key words: Corona-  Letter – MLA- Jameer Ahmed Khan – CM –BS yeddyurappa