ರೇಷ್ಮೆಗೂಡಿಗೆ ರಕ್ಷಣಾತ್ಮಕ ದರ ನೀಡಲು ಹಣ ಮಂಜೂರು….

ಬೆಂಗಳೂರು,ಜು,11,2020(www.justkannada.in):  ರೇಷ್ಮೆ ಬೆಳೆಗಾರರ ಹಿತ ರಕ್ಷಣೆ ಮಾಡುವಲ್ಲಿ ತೋಟಗಾರಿಕೆ ಸಚಿವ ಡಾ| ನಾರಾಯಣಗೌಡ ಮತ್ತೊಮ್ಮೆ ಯಶಸ್ವಿಯಾಗಿದ್ದಾರೆ. ರೇಷ್ಮೆ ರೀಲರ್ಸ್ ಗಳಿಗೆ ಅಡಮಾನ ಸಾಲದ ಮಿತಿಯನ್ನು 2 ಲಕ್ಷ ರೂ. ಗೆ ಏರಿಸಿದ್ದಲ್ಲದೆ 20 ಕೋಟಿ. ರೂ. ಹಣವನ್ನೂ ನೀಡಿದ್ದರು. ಈಗ ರೇಷ್ಮೆ ಬೆಳೆಗಾರರ ನೆರವಿಗೆ ಸಚಿವರು ಧಾವಿಸಿದ್ದಾರೆ.jk-logo-justkannada-logo

ಕೋವಿಡ್ -19 ಹಿನ್ನೆಲೆಯಲ್ಲಿ ರೇಷ್ಮೆ ಗೂಡಿನ ದರ ಕುಸಿದಿತ್ತು. ಸಂಕಷ್ಟಕ್ಕೆ ಸಿಲುಕಿದ ರೈತರು ರೇಷ್ಮೆ ಸಚಿವ ಡಾ| ನಾರಾಯಣಗೌಡ ಅವರಲ್ಲಿ ಮನವಿ ಮಾಡಿದ್ದರು. ತಕ್ಷಣವೇ ಅಧಿಕಾರಿಗಳ ಜೊತೆ ಸಭೆ ನಡೆಸಿ, ರೈತರಿಗೆ ರಕ್ಷಣಾತ್ಮಕ ದರ ನೀಡಲು ಸಚಿವ ನಾರಾಯಣಗೌಡ ಸೂಚಿಸಿದ್ದಾರೆ. ಈಗಾಗಲೆ 10 ಕೋಟಿ ರೂ. ಹಣವನ್ನೂ ಬಿಡುಗಡೆ ಮಾಡಿದ್ದಾರೆ.

ಮಾರುಕಟ್ಟೆಯಲ್ಲಿ ರೇಷ್ಮೆ ಗೂಡಿನ ಗುಣಮಟ್ಟ ಆಧರಿಸಿ ದರ ನಿಗದಿ ಮಾಡಲಾಗುತ್ತೆ. ಗುಣಮಟ್ಟಕ್ಕೆ ನಿಗದಿಪಡಿಸಿರುವ ದರ ಸಿಗದೆ ಇದ್ದಲ್ಲಿ, ಸರ್ಕಾರ ರಕ್ಷಣಾತ್ಮಕ ದರ ನೀಡಲಿದೆ. ಪ್ರತಿ ಕೆ.ಜಿ. ರೇಷ್ಮೆ ಗೂಡಿಗೆ 50 ರೂ. ಮೀರದಂತೆ ರಕ್ಷಣಾತ್ಮಕ ದರ ನೀಡಲಾಗುವುದು. ಇದರಿಂದ ರೈತರಿಗೆ ದರ ಕುಸಿತದಿಂದ ಕಂಗಾಲಾಗಿದ್ದ ರೈತರಿಗೆ ಆಸರೆ ಸಿಗಲಿದೆ. ಕೆಲ ತಿಂಗಳ ಹಿಂದಿನಿಂದಲೇ ದರಕುಸಿತವಾಗಿರುವ ಕಾರಣ ಹಿಂದೆ ಆಗಿರುವ ನಷ್ವನ್ನೂ ರೈತರಿಗೆ ಭರಿಸಲು ತೀರ್ಮಾನಿಸಲಾಗಿದೆ. ರಕ್ಷಣಾತ್ಮಕ ದರವನ್ನು ಎಪ್ರಿಲ್ 1 ರಿಂದಲೇ ಅನ್ವಯವಾಗುವಂತೆ ನೀಡಲು ಸೂಚಿಸಲಾಗಿದೆ. ಇದಕ್ಕಾಗಿ 10 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಮುಂದೆಯೂ ರೇಷ್ಮೆ ಬೆಳೆಗಾರರಿಗೆ ಸಮಸ್ಯೆ ಎದುರಾದಲ್ಲಿ ಅಗತ್ಯ ಕ್ರಮ ವಹಿಸಲು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.funds-granted-provide-defensive-rate-silk-nest

ರಕ್ಷಣಾತ್ಮಕ ದರದ ಹಣವೂ ನೇರವಾಗಿ ರೈತರ ಖಾತೆಗೆ ಜಮಾ ಮಾಡಲು ಕ್ರಮ ವಹಿಸಲಾಗಿದೆ. ಇದರಿಂದ ಸರ್ಕಾರದ ನೆರವು ಮಧ್ಯವರ್ತಿಗಳ ಪಾಲಾಗುವುದು ತಪ್ಪಿದೆ. ಜೊತೆಗೆ ರೇಷ್ಮೆ ಗೂಡಿನ ಧಾರಣೆ ಸುಧಾರಿಸುವವರೆಗೂ ರಕ್ಷಣಾತ್ಮಕ ದರ ನೀಡಲು ನಿರ್ಧರಿಸಲಾಗಿದೆ.

Key words: Funds -granted – provide – defensive rate – Silk nest