Monday, October 5, 2026

BDA Apartments

ಪ್ರಧಾನಿ ಮೋದಿ ಭೇಟಿಯಾಗಿ BDA JK_Adv BDA Adv
Home Front Page ಡಿಸಿ ಮನವಿ ಮಾಡಿದ್ರೂ ಶಾಸಕರು ಕಾಮಗಾರಿಗೆ ಪೂಜೆ ಮಾಡಿದ್ರು…

ಡಿಸಿ ಮನವಿ ಮಾಡಿದ್ರೂ ಶಾಸಕರು ಕಾಮಗಾರಿಗೆ ಪೂಜೆ ಮಾಡಿದ್ರು…

ಮೈಸೂರು, ಜುಲೈ 10,2020(www.justkannada.in): ಜಿಲ್ಲಾಧಿಕಾರಿ ಮನವಿಗೆ ಬಿಜೆಪಿ ಶಾಸಕ ಎಲ್ ನಾಗೇಂದ್ರ ಮನ್ನಣೆ ನೀಡಿದೇ ಭೂಮಿಪೂಜೆ ಕಾರ್ಯಕ್ರಮ ನಡೆಸಿದ್ದಾರೆ.

ಕೋವಿಡ್ ಹರಡುವಿಕೆ ಹಿನ್ನೆಲೆಯಲ್ಲಿ ನಾನಾ ಕಾಮಗಾರಿಗಳಿಗೆ ಭೂಮಿಪೂಜೆ ಕಾರ್ಯಕ್ರಮಗಳನ್ನು ರದ್ದು ಮಾಡುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಮನವಿ ಮಾಡಿದ್ದರು.

ಆದರೆ ಚಾಮರಾಜ ಕ್ಷೇತ್ರದ ಶಾಸಕ ಎಲ್ ನಾಗೇಂದ್ರ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದ ಮರು ದಿನವೇ ಭೂಮಿಪೂಜೆ ಕಾರ್ಯಕ್ರಮ ನಡೆಸಿದ್ದಾರೆ.

ನಗರದ 25 ನೇ ವಾರ್ಡಿನ ಕೈಲಾಸಪುರಂ ಬಡಾವಣೆಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಪೂಜೆ ನೆರವೆರಿಸಿದ ಶಾಸಕ ಎಲ್ ನಾಗೇಂದ್ರ ಡಿಸಿ ಮನವಿಗೆ ಮನ್ನಣೆ ನೀಡಿಲ್ಲ.