ವಕೀಲರ ಸೇವೆಯನ್ನು ಅಗತ್ಯ ಸೇವೆ ಎಂದು ಪರಿಗಣಿಸಿ- ಸಿಎಂಗೆ ಹಿರಿಯ ವಕೀಲ ಆ.ಮ ಭಾಸ್ಕರ್ ಮನವಿ….

ಮೈಸೂರು,ಜು,10,2020(www.justkannada.in): ಕೊರೋನಾ ಹಿನ್ನೆಲೆ ಲಾಕ್ಡೌನ್ ಇರುವುದರಿಂದ ಮುಕ್ತವಾಗಿ ಸಂಚರಿಸಲು ಹಾಗೂ ತಮ್ಮ  ಕರ್ತವ್ಯವನ್ನು ನಿರ್ವಹಿಸಲು ವಕೀಲರುಗಳಿಗೆ ತೊಂದರೆ ಉಂಟಾಗಿದೆ. ಹೀಗಾಗಿ ವಕೀಲರ ಸೇವೆಯನ್ನು ಅಗತ್ಯ ಸೇವೆ(essential services )ಎಂದು ಪರಿಗಣಿಸಿ ಆದೇಶ ಹೊರಡಿಸಿ ಎಂದು ಮುಖ್ಯಮಂತ್ರಿ ಬಿ,ಎಸ್ ಯಡಿಯೂರಪ್ಪಗೆ ಮೈಸೂರಿನ ವಕೀಲ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾನೂನು ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆ ಅಧ್ಯಕ್ಷರಾದ ಅ.ಮ ಭಾಸ್ಕರ್ ಮನವಿ ಮಾಡಿದ್ದಾರೆ.jk-logo-justkannada-logo

ಈ ಕುರಿತು ಸಿಎಂ ಬಿಎಸ್ ವೈಗೆ ಪತ್ರ ಬರೆದಿರುವ ವಕೀಲ ಅ.ಮ ಭಾಸ್ಕರ್, ಈ ಮೂಲಕ  ತಮ್ಮಲ್ಲಿ ಕೋರಿ ಕೊಳ್ಳುವುದೇನೆಂದರೆ ಕರ್ನಾಟಕ ರಾಜ್ಯದಾದ್ಯಂತ ವಕೀಲರುಗಳು ಪ್ರಜಾಸತ್ತಾತ್ಮಕವಾಗಿ ಸಂವಿಧಾನಬದ್ಧ ಹಕ್ಕುಗಳ ಹಾಗೂ ನಾಗರಿಕ ಹಕ್ಕುಗಳ ಯಶಸ್ವಿ ಪಾಲನೆಗಾಗಿ ನ್ಯಾಯಾಲಯಗಳಲ್ಲಿ ಹಾಗೂ ವಿವಿಧ ಕಡೆ  ಕರ್ತವ್ಯವನ್ನು ನಿರ್ವಹಿಸುತ್ತಿದ್ದು ಇತ್ತೀಚೆಗೆ ಕೋವಿಡ್-19 ಪ್ರಯುಕ್ತ ಲಾಕ್ಡೌನ್ ಇರುವುದರಿಂದ ಮುಕ್ತವಾಗಿ ಸಂಚರಿಸಲು ಹಾಗೂ ತಮ್ಮ  ಕರ್ತವ್ಯವನ್ನು ನಿರ್ವಹಿಸಲು ವಕೀಲರು ಗಳಿಗೆ ತೊಂದರೆ ಉಂಟಾಗಿರುತ್ತದೆ.lawyers-essential-service-letter-cm-senior-lawyer-a-ma-bhaskar

ವಕೀಲರುಗಳು ಹೆಚ್ಚಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪ್ರಯಾಣ ಮಾಡುವ ಸಂದರ್ಭಗಳು ಹೆಚ್ಚಾಗಿರುವುದರಿಂದ ವಕೀಲರುಗಳ ಸೇವೆಯನ್ನು ಅಗತ್ಯ ಸೇವೆ ಎಂದು ಪರಿಗಣಿಸಿದರೆ ವಕೀಲರುಗಳು ಮುಕ್ತವಾಗಿ ಪ್ರಜಾಸತ್ತಾತ್ಮಕವಾಗಿ ಸಂವಿಧಾನಬದ್ಧ ಹಕ್ಕುಗಳ ಯಶಸ್ವಿ ಪಾಲನೆಗಾಗಿ ಕರ್ತವ್ಯ ನಿರ್ವಹಿಸಲು ಇದರಿಂದ ಸಾಧ್ಯವಾಗುತ್ತದೆ. ಅದ್ದರಿಂದ ಈ ಕುರಿತು ಸೂಕ್ತ  ಕ್ರಮ ವಹಿಸಿ ವಕೀಲರುಗಳಿಗೆ ಅನುಕೂಲ ಮಾಡಿಕೊಡುವಂತೆ ಕೋರುತ್ತೇನೆ ಎಂದು ಅ.ಮ ಭಾಸ್ಕರ್ ಮನವಿ ಮಾಡಿದ್ದಾರೆ.lawyers-essential-service-letter-cm-senior-lawyer-a-ma-bhaskar

Key words: lawyer’s- essential- service – letter -CM – senior lawyer –A.ma. Bhaskar