Saturday, September 12, 2026

BDA Apartments

Home Front Page ಜು. 25 ರಿಂದ SSLC ಪರೀಕ್ಷೆ : ಸರಕಾರಕ್ಕೆ ‘ ಕ್ಲಾಸ್ ‘ ತೆಗೆದುಕೊಂಡ ವಾಟಾಳ್...

ಜು. 25 ರಿಂದ SSLC ಪರೀಕ್ಷೆ : ಸರಕಾರಕ್ಕೆ ‘ ಕ್ಲಾಸ್ ‘ ತೆಗೆದುಕೊಂಡ ವಾಟಾಳ್ ನಾಗರಾಜ್ .

 

ಬೆಂಗಳೂರು, ಜೂ.23, 2020 : (www.justkannada.in news) : ರಾಜ್ಯದ ಮುಖ್ಯಮಂತ್ರಿ, ಮಂತ್ರಿಗಳು,ಅಧಿಕಾರಿಗಳು ಅರಾಮಿರಬೇಕು.ಎಸ್.ಎಸ್.ಎಲ್.ಸಿ ಮಕ್ಕಳು ಮಾತ್ರ ಬಾವಿಗೆ ಬೀಳಬೇಕೇ..?ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಗುರುವಾರದಿಂದ ನಡೆಯಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ತಕ್ಷಣ ರದ್ದುಗೊಳಿಸಲು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

pro-kannada-activist- vatal-nagaraj-opposed-SSLC-exams-conduct-by-Karnataka-government

ನಾಡಿನ ಎಂಟು ಲಕ್ಷಕ್ಕೂ ಹೆಚ್ಚು ಮಕ್ಕಳನ್ನು ಪರೀಕ್ಷೆ ಬರೆಯಲು ಬೀದಿಗಿಳಿಸುವುದು ದೊಡ್ಡ ಗಂಡಾತರಕ್ಕೆ ಕಾರಣವಾಗಲಿದೆ ಎಂದು ಎಚ್ಚರಿಸಿದ್ದಾರೆ. ಆ ಮಕ್ಕಳನ್ನು ಬೀದಿಗಿಳಿಸುತ್ತಿರುವ ಸರ್ಕಾರ ತಾನು ಮಾತ್ರ ಸುರಕ್ಷಿತವಾಗಿರಲು ಬಯಸುತ್ತಿರುವುದೇಕೆ? ತಕ್ಷಣ ವಿಧಾನಮಂಡಲ ಅಧಿವೇಶನ ಕರೆದು ಇವರು ಉಭಯ ಸದನಗಳ ಎಲ್ಲ ಶಾಸಕರು ಪಾಲ್ಗೊಳ್ಳುವಂತೆ ಮಾಡಲಿ ಎಂದು ಸವಾಲೆಸೆದರು.
ಕೊರೋನಾ ಸೋಂಕಿನಿಂದ ರಾಜಧಾನಿ ಬೆಂಗಳೂರು ತಲ್ಲಣಿಸಿದೆ.ಲಾಕ್ ಡೌನ್,ಸೀಲ್ ಡೌನ್ ಗಳ ಹೊಡೆತಕ್ಕೆ ಮುದುರಿ ಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು ಪರೀಕ್ಷೆ ಬರೆಯಬೇಕು ಎನ್ನುವುದು ಅಮಾನವೀಯ. ಹೀಗಾಗಿ ಈ ವರ್ಷ ಪರೀಕ್ಷೆ ರದ್ದು ಮಾಡಿ, ಮಕ್ಕಳನ್ನು ತೇರ್ಗಡೆ ಮಾಡಿ ಎಂದು ಸರ್ಕಾರವನ್ನು ಆಗ್ರಹಿಸಿದರು.

pro-kannada-activist- vatal-nagaraj-opposed-SSLC-exams-conduct-by-Karnataka-government

ರಾಜ್ಯದ ಯಾವ ಜಿಲ್ಲೆ ಆತಂಕದಿಂದ ಮುಕ್ತವಾಗಿದೆ?ಎಂದು ಪ್ರಶ್ನಿಸಿದ ಅವರು ಯಾವ ಕಾರಣಕ್ಕೂ ಪರೀಕ್ಷೆ ಬೇಡ. ಹಾಗೊಂದು ವೇಳೆ ಪರೀಕ್ಷೆ ನಡೆಸಿ ಹೆಚ್ಚು ಕಡಿಮೆಯಾದರೆ ಅದರ ಸಂಪೂರ್ಣ ಜವಾಬ್ದಾರಿ ರಾಜ್ಯ ಸರ್ಕಾರದ್ದು ಎಂದು ಎಚ್ಚರಿಸಿದರು.

oooo

key words : pro-kannada-activist- vatal-nagaraj-opposed-SSLC-exams-conduct-by-Karnataka-government