ಮೈಸೂರಿನಲ್ಲಿ ಮತ್ತೆ ಮೂರು ಕೊರೋನಾ ಪಾಸಿಟೀವ್ ಕೇಸ್..?: ಮತ್ತೆರೆಡು ಏರಿಯಾ ಸೀಲ್ ಡೌನ್

ಮೈಸೂರು,ಜೂ,23,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಿನೇ ದಿನೇ ಕೊರೋನಾ ಪಾಸಿಟಿವ್ ಕೇಸ್ ಗಳು ಹೆಚ್ಚಾಗುತ್ತಿದ್ದು,  ನಗರ ಭಾಗದ ಹಲವು ಏರಿಯಾಗಳನ್ನ ಸೀಲ್ ಡೌನ್ ಮಾಡಲಾಗಿದೆ. ಈ ನಡುವೆ ಇಂದು ಮತ್ತೆ ಮೂವರಲ್ಲಿ ಕೊರೋನಾ ಸೋಂಕು ಇರುವ ಸಾಧ್ಯತೆ ಕಂಡು ಬಂದಿದೆ.

ಚೆನ್ನೈ ಟ್ರಾವಲ್ ಹಿಸ್ಟರಿ ಹೊಂದಿರುವ 8 ಮತ್ತು 10 ವರ್ಷದ ಮಕ್ಕಳಿಗೂ ಕೊರೋನಾ ಸೋಂಕು ತಗುಲಿದೆ ಎನ್ನಲಾಗಿದೆ. ಜೊತೆಗೆ  ಮತ್ತೊಂದು ಪ್ರತೇಕ ಪ್ರಕರಣ ಪತ್ತೆಯಾಗಿದ್ದು 31 ವರ್ಷದ ವ್ಯಕ್ತಿಗೆ ಕೊರೋನಾ ಸಾಧ್ಯತೆ ಇದೆ. ಮೂರು ಪ್ರಕರಣಗಳು ಚೆನ್ನೈ ಟ್ರಾವಲ್ ಹಿಸ್ಟರಿ ಹೊಂದಿದ್ದು, ಮೈಸೂರಿನ ಶ್ರೀರಾಂಪುರ ಹಾಗೂ ದೇವಯ್ಯನ ಹುಂಡಿ ನಿವಾಸಿಗಳಾಗಿದ್ದಾರೆ.

ಸೋಂಕಿತರು ವಿಮಾನ ಮೂಲಕ ಮೈಸೂರಿಗೆ ಆಗಮಿಸಿದ್ದು ಮೂವರಿಗೂ ಕೊರೋನಾ ಸೋಂಕು ಪತ್ತೆಯಾಗಿರುವ ಸಾಧ್ಯತೆ ಇದೆ. ಹೀಗಾಗಿ ಅವರ ಕುಟುಂಬಸ್ಥರನ್ನು ಕ್ವಾರಂಟೈನ್ ಮಾಡಲಾಗಿದ್ದು ಮೈಸೂರಿ‌ಲ್ಲಿ ಮತ್ತೆರಡು ಏರಿಯಾಗಳು ಕಂಟೈನ್ಮೆಂಟ್ ಝೋನ್ ಗಳಾಗಿವೆ. ಕೊರೋನಾ ಸೋಂಕು ಹಿನ್ನೆಲೆ ಶ್ರೀರಾಮ್ ಪುರದ ಬಲಮುರಿ ಗಣಪತಿ ದೇವಸ್ಥಾನದ ರಸ್ತೆ ಹಾಗೂ ದೇವಯ್ಯನಹುಂಡಿ ಶಾಲೆಯ ಹಿಂಭಾಗ ರಸ್ತೆಯನ್ನ  ಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಗರಾಜ್ ನೇತೃತ್ವದಲ್ಲಿ ಸೀಲ್ ಡೌನ್ ಮಾಡಲಾಗಿದೆ.three-corona-positive-case-mysore

ಕಂಟೋನ್ಮೆಂಟ್ ವ್ಯಾಪ್ತಿಯಲ್ಲಿ ನಗರ ಪಾಲಿಕೆ ಅಧಿಕಾರಿಗಳು ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದು, ಕಂಟೋನ್ಮೆಂಟ್ ನಲ್ಲಿರುವ ಜನರಿಗೆ ಅಗತ್ಯ ವಸ್ತುಗಳ ಪೂರೈಕೆಗೆ ವಾಟ್ಸಪ್ ಗ್ರೂಪ್ ರಚನೆ ಮಾಡಿದ್ದಾರೆ. ವಾಟ್ಸಾಪ್ ಗ್ರೂಪ್ ಮೂಲಕ ಮಾಹಿತಿ ಪಡೆದು ಅಗತ್ಯವಸ್ತುಗಳನ್ನ ಪೂರೈಸಲು ನಗರ ಪಾಲಿಕೆ ವ್ಯವಸ್ಥೆ ಮಾಡಿದೆ.

ಮೈಸೂರಿನಲ್ಲಿ ಸೀಲ್ ಡೌನ್ ಏರಿಯಾ ಹೆಚ್ಚಾಗುತ್ತಿದ್ದು, ಕೊರೊನಾ ಸೋಂಕಿತರಿಂದ ಸ್ಥಳೀಯರಲ್ಲಿ ಎದೆ ಬಡಿತ ಹೆಚ್ಚಳವಾಗಿದೆ

Key words: Three- Corona- Positive Case – Mysore