Saturday, August 15, 2026

BDA Apartments

Home Cinema ಹುಚ್ಚ ವೆಂಕಟ್ ಕಂಡರೆ ಕರೆ ಮಾಡಿ: ಚಿಕಿತ್ಸೆ ನೀಡಲು ಮುಂದಾದ ಕಿಚ್ಚ ಚಾರಿಟೇಬಲ್ ಸೊಸೈಟಿ

ಹುಚ್ಚ ವೆಂಕಟ್ ಕಂಡರೆ ಕರೆ ಮಾಡಿ: ಚಿಕಿತ್ಸೆ ನೀಡಲು ಮುಂದಾದ ಕಿಚ್ಚ ಚಾರಿಟೇಬಲ್ ಸೊಸೈಟಿ

ಬೆಂಗಳೂರು, ಜೂನ್ 20, 2020 (www.justkannada.in): ಕೆಲವರಿಂದ ಹಲ್ಲೆಗೊಳಗಾಗಿರುವ ವೆಂಕಟ್‍ಗೆ ನಟ ಕಿಚ್ಚ ಸುದೀಪ್ ಚಿಕಿತ್ಸೆಗೆ ನೆರವಾಗಲು ಮುಂದಾಗಿದ್ದಾರೆ.

ಕಿಚ್ಚ ಚಾರಿಟೇಬಲ್ ಸೊಸೈಟಿ ಈ ಬಗ್ಗೆ ಮಾಹಿತಿ ನೀಡಿದ್ದು, ಜನರು ಸ್ವಲ್ಪ ಸಂಯಮದಿಂದ ವರ್ತಿಸಬೇಕೆಂದು ಮನವಿ ಮಾಡಿದ್ದಾರೆ. ಹುಚ್ಚ ವೆಂಕಟ್ ಅವರಿಗೆ ಚಿಕಿತ್ಸೆ ಮತ್ತು ಸ್ವಾಂತನ ನೀಡಲು ನಮ್ಮ ಕಿಚ್ಚ ಸುದೀಪ್ ಸರ್ ನಿರ್ಧರಿಸಿ, ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿಗೆ ಅನುಮತಿ ನೀಡಿದ್ದಾರೆ.

ಯಾವುದೇ ಸ್ಥಳದಲ್ಲಿ ಹುಚ್ಚ ವೆಂಕಟ್ ಅವರು ಕಂಡು ಬಂದಲ್ಲಿ ನಮಗೆ ಕರೆ ಮಾಡಿ ತಿಳಿಸಿ ಎಂದು ಮೊಬೈಲ್ ನಂಬರ್ ನೀಡಿದ್ದಾರೆ. 6360334455. ಅಂದಹಾಗೆ ಜೂನ್ 10 ರಂದು ಮಂಡ್ಯದ ಉಮ್ಮಡಹಳ್ಳಿ ಹುಚ್ಚಾ ವೆಂಕಟ್ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿತ್ತು.