Saturday, September 19, 2026

BDA Apartments

ಸೋಷಿಯಲ್ ಮೀಡಿಯಾದಲ್ಲಿ ಯುವರತ್ನ ಸಿನಿಮಾದ ಫೋಟೋ ಲೀಕ್ BDA JK_Adv BDA Adv
Home Cinema ಸೋಷಿಯಲ್ ಮೀಡಿಯಾದಲ್ಲಿ ಯುವರತ್ನ ಸಿನಿಮಾದ ಫೋಟೋ ಲೀಕ್

ಸೋಷಿಯಲ್ ಮೀಡಿಯಾದಲ್ಲಿ ಯುವರತ್ನ ಸಿನಿಮಾದ ಫೋಟೋ ಲೀಕ್

ಬೆಂಗಳೂರು, ಜೂನ್ 15, 2020 (www.justkannada.in): ಕಿಡಿಗೇಡಿಗಳು ಯುವರತ್ನ ಸಿನಿಮಾದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಮಾಡಿದ್ದಾರೆ.

ಯಾರು ಫೋಟೋಗಳನ್ನು ಹಂಚಿಕೊಳ್ಳದ್ದಂತೆ ಚಿತ್ರದ ನಿರ್ದೇಶಕ ಆನಂದ್ ರಾಮ್ ಟ್ವಿಟ್ಟರ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಅಂದಹಾಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ ಬಹುನಿರೀಕ್ಷೆಯ ಯುವರತ್ನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್ ಡೌನ್ ನಿಂದ ಸುಮಾರು ತಿಂಗಳುಗಳ ಕಾಲ ಮನೆಯಲ್ಲಿಯೆ ಇದ್ದ ಅಪ್ಪು ಇತ್ತೀಚಿಗಷ್ಟೆ ಚಿತ್ರದ ಕೆಲಸಕ್ಕೆ ಮರಳಿದ್ದಾರೆ. ಸದ್ಯ ಯುವರತ್ನ ಚಿತ್ರದ ಕೆಲಸಗಳು ಬಿರುಸಿನಿಂದ ನಡೆಯುತ್ತಿದೆ.

#beARealpowerstarFan ಎಂಬ ಅಭಿಯಾನವನ್ನೂ ಆನಂದ್ ರಾಮ್ ಪ್ರಾರಂಭಿಸಿದ್ದಾರೆ. ಇತ್ತೀಚಿಗಷ್ಟೆ ಚಿತ್ರದಿಂದ ಪವರ್ ಫುಲ್ ಫೋಟೋವೊಂದನ್ನು ರಿಲೀಸ್ ಮಾಡಿತ್ತು ಸಿನಿಮಾತಂಡ.