Wednesday, September 30, 2026

BDA Apartments

ಮೇ ಡೇಯಲ್ಲಿ ಕೈ ಗದ್ದಲ BDA JK_Adv BDA Adv
Home News ಮೇ ಡೇಯಲ್ಲಿ ಕೈ ಗದ್ದಲ: ಮಾಜಿ ಕಾರ್ಪೊರೇಟರ್ ಥಳಿಸಿದ ಹಾಲಿ ಕಾರ್ಪೊರೇಟರ್

ಮೇ ಡೇಯಲ್ಲಿ ಕೈ ಗದ್ದಲ: ಮಾಜಿ ಕಾರ್ಪೊರೇಟರ್ ಥಳಿಸಿದ ಹಾಲಿ ಕಾರ್ಪೊರೇಟರ್

ಮೈಸೂರಿನಲ್ಲಿ ಕಾರ್ಮಿಕ ದಿನಾಚಾರಣೆ ವೇಳೆ ಗದ್ದಲ: ‘ಕೈ’ ಪಾಲಿಕೆ ಸದಸ್ಯ ಲೋಕೇಶ್ ಪಿಯಾ ಬೆಂಬಲಿಗರಿಂದ ಗಲಾಟೆ…

ಮೈಸೂರು,ಮೇ,1,2019(www.justkannada.in): ಕಾಂಗ್ರೆಸ್ ಪ್ರಚಾರ ಸಮಿತಿ  ಮೈಸೂರಿನಲ್ಲಿ ಆಯೋಜಿಸಿದ್ದ ಕಾರ್ಮಿಕರ ದಿನಾಚಾರಣೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ಮಾಡಿರುವ ಘಟನೆ ನಡೆದಿದೆ.

ಇಂದು ಕಾರ್ಮಿಕರ ದಿನಚಾರಣೆ ಅಂಗವಾಗಿ ಕಾಂಗ್ರೆಸ್ ಪ್ರಚಾರ ಸಮಿತಿ ಮೈಸೂರಿನ ಜೆಎಲ್ ಬಿ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಕೂಲಿಕಾರರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಿತ್ತು. ಈ ವೇಳೆ ಕಾಂಗ್ರೆಸ್ ಮುಖಂಡ ಪಾಲಿಕೆ ಸದಸ್ಯ ಲೋಕೇಶ್ ಪಿಯಾ ಬೆಂಬಲಿಗರು ಗಲಾಟೆ ಮಾಡಿದ್ದಾರೆ.

ಅಹ್ವಾನ ಪತ್ರಿಕೆ ಯಲ್ಲಿ ಮಾಜಿ ಶಾಸಕ ಸೋಮಶೇಖರ್ ಪೋಟೋ ಹಾಕದ ಹಿನ್ನೆಲೆ. ಈ ಗದ್ದಲ ನಡೆದಿದೆ. ಮಾಜಿ ಪಾಲಿಕೆ ಸದಸ್ಯ ಅಶೋಕ್ ಗೆ ಮಾಜಿ ಶಾಸಕ ಸೋಮಶೇಖರ್ ಬೆಂಬಲಿಗರು ಕ್ಲಾಸ್ ತೆಗೆದುಕೊಂಡಿದ್ದು ಕತ್ತಿನ ಪಟ್ಟಿ ಹಿಡಿದು ಅಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಇನ್ನು ಇದೇ ವೇಳೆ ನಗರ ಅಧ್ಯಕ್ಷ ಮೂರ್ತಿ ಹಾಗೂ ಪರಿಷತ್ ಸದಸ್ಯ ಧರ್ಮಸೇನಾ ಮುಂದೆಯೂ ಬೆಂಬಲಿಗರು  ಅಸಮಾಧಾನ ಹೊರ ಹಾಕಿದರು.

https://youtu.be/pOIuQpXTifc

Congress Corporater Lokesh V Piya assaults ex-corporator Ashoka in Mysore on May Day