Tuesday, September 29, 2026

BDA Apartments

ಕೋವಿಡ್ 19 ತಪಾಸಣೆಗೆ ಒಳಪಟ್ಟ ಬೆಂಗೂಳೂರಿನ 120 ಮಾಧ್ಯಮ ಪ್ರತಿನಿಧಿಗಳು BDA JK_Adv BDA Adv
Home Front Page ಕೋವಿಡ್ 19 ತಪಾಸಣೆಗೆ ಒಳಪಟ್ಟ ಬೆಂಗೂಳೂರಿನ 120 ಮಾಧ್ಯಮ ಪ್ರತಿನಿಧಿಗಳು

ಕೋವಿಡ್ 19 ತಪಾಸಣೆಗೆ ಒಳಪಟ್ಟ ಬೆಂಗೂಳೂರಿನ 120 ಮಾಧ್ಯಮ ಪ್ರತಿನಿಧಿಗಳು

ಬೆಂಗಳೂರು, ಏಪ್ರಿಲ್ 22, 2020 (www.justkannada.in): ಮುಖ್ಯಮಂತ್ರಿಯವರ ಸೂಚನೆಯ ಮೇರೆಗೆ ರಾಜ್ಯದ ರಾಜಧಾನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮದವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಲ್ಲಿ ಇಂದು ಆಯೋಜಿಸಿದ್ದ ಕೋವಿಡ್-19 ತಪಾಸಣಾ ಶಿಬಿರದಲ್ಲಿ ವಿದ್ಯುನ್ಮಾನ ಮಾಧ್ಯಮದ 120 ಪ್ರತಿನಿಧಿಗಳು ತಪಾಸಣೆಗೆ ಒಳಪಟ್ಟರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಎಸ್ ಎನ್ ಸಿದ್ದರಾಮಪ್ಪ ಅವರು ನಗರದ ಇಂದಿರಾ ನಗರದ ಸರ್ ಸಿ ವಿ ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ತಪಾಸಣಾ ಶಿಬಿರಕ್ಕೆ ಭೇಟಿ ನೀಡಿ ಅಲ್ಲಿದ್ದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದರು.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ರಾಧಾಕೃಷ್ಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಡಿ. ಪಿ. ಮುರಳೀಧರ್ ಅವರೂ ಈ ಸಂದರ್ಭದಲ್ಲಿ ಹಾಜರಿದ್ದರು. ಈ ತಪಾಸಣಾ ಶಿಬಿರ ಇನ್ನೂ ಎರಡು ದಿನಗಳು ನಡೆಯಲಿದೆ.