Saturday, August 1, 2026

BDA Apartments

Home Front Page ಈಡೇರಿತು ಸಂಸದ ವಿ. ಶ್ರೀನಿವಾಸ್ ಪ್ರಸಾದ್  ಅವರು ಮಾಡಿದ್ದ ಶಪಥ ..!!

ಈಡೇರಿತು ಸಂಸದ ವಿ. ಶ್ರೀನಿವಾಸ್ ಪ್ರಸಾದ್  ಅವರು ಮಾಡಿದ್ದ ಶಪಥ ..!!

ಮೈಸೂರು,ಮೇ, 28,2019(www.justkannada.in): ಸಚಿವ ಸಂಪುಟದಿಂದ ಕೈ ಬಿಟ್ಟು ನಂತರ ನಂಜನಗೂಡು ಉಪ ಚುನಾವಣೆಯಲ್ಲಿ ಸೋಲಿಸುವ ಮೂಲಕ  ವಿ. ಶ್ರೀನಿವಾಸ್ ಪ್ರಸಾದ್  ಅವರ ರಾಜಕೀಯ ಅಂತ್ಯ ಮಾಡಲು ಹೊರಟಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅಂಡ್ ಟೀಮ್ ಗೆ ಇದೀಗ ಶ್ರೀನಿವಾಸ್ ಪ್ರಸಾದ್ ಅವರು ಶಾಕ್ ಮೇಲೆ ಶಾಕ್ ನೀಡುತ್ತಿದ್ದಾರೆ.

ಹೌದು, ಚುನಾವಣೆಯಲ್ಲಿ ಒಬ್ಬಬ್ಬರನ್ನಾಗಿ ಸೋಲಿಸುವ ಮೂಲಕ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಚಾಮುಂಡೇಶ್ವರಿ  ಕ್ಷೇತ್ರದಲ್ಲಿ ಸಿದ್ದರಾಮಯ್ಯರನ್ನ ಹೀನಾಯವಾಗಿ ಸೋಲಿಸಲು ಕಾರಣರಾಗಿದ್ದ ಶ್ರೀನಿವಾಸ್ ಪ್ರಸಾದ್ ಅದೇ ಚುನಾವಣೆಯಲ್ಲಿ ಸಿದ್ದರಾಮಯ್ಯ ಆಪ್ತರಾದ ಮಾಜಿ ಸಚಿವ ಡಾ.ಹೆಚ್ ಸಿ ಮಹದೇವಪ್ಪ ಹಾಗೂ ಮಾಜಿ ಸಚಿವೆ ಗೀತಾ ಮಹಾದೇವ ಪ್ರಸಾದ್ ಅವರನ್ನ ಸೋಲಿಗೆ ಕಾರಣವಾಗುವ ಮೂಲಕ ಸೇಡು ತೀರಿಸಿಕೊಂಡಿದ್ದರು.

ಇದೀಗ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಸ್ಪರ್ದಿಸಿದ್ದ ಸಿದ್ದರಾಮಯ್ಯ ಆಪ್ತ ಮಾಜಿ ಸಂಸದ ಆರ್ ಧ್ರುವನಾರಾಯಣ್ ರನ್ನ ಸೋಲಿಸುವ ಮೂಲಕ ವಿ,ಶ್ರೀನಿವಾಸ್ ಪ್ರಸಾದ್  ತಾವು ಮಾಡಿದ್ದ ಶಪಥ ಈಡೇರಿಸಿಕೊಂಡಿದ್ದಾರೆ. ಈ ಮೂಲಕ ಎರಡು ಜಿಲ್ಲೆಯನ್ನ  ಹಿಡಿತಕ್ಕೆ ತೆಗೆದುಕೊಂಡಿದ್ದಾರೆ.

ರಾಜಕೀಯ ಪುನರ್ಜನ್ಮ ಪಡೆಯುವ ಮೂಲಕ ಎರಡು ಜಿಲ್ಲೆಗಳಲ್ಲಿ  ಸಿದ್ದರಾಮಯ್ಯ ಆಪ್ತರಿಗೆ ಕಾಡುತ್ತಿರುವ ಶ್ರೀನಿವಾಸ್ ಪ್ರಸಾದ್ ಅವರು ಮುಂದಿನ ಟಾರ್ಗೆಟ್ ಯಾರು ಎಂದು ಚರ್ಚೆ  ನಡೆಯುತ್ತಿದೆ.

Key words: MP V. Srinivas Prasad’s Vow  was fulfil.

#Mysore #MPSrinivasPrasad #siddaramaiah