Tuesday, October 6, 2026

BDA Apartments

immense respect BDA JK_Adv BDA Adv
Home Front Page ಧ್ರುವನಾರಾಯಣ್’ಗಾಗಿ ವಿಧಾನ ಪರಿಷತ್ ಸ್ಥಾನ ತ್ಯಜಿಸುವೆ: ಧರ್ಮಸೇನಾ

ಧ್ರುವನಾರಾಯಣ್’ಗಾಗಿ ವಿಧಾನ ಪರಿಷತ್ ಸ್ಥಾನ ತ್ಯಜಿಸುವೆ: ಧರ್ಮಸೇನಾ

ಮೈಸೂರು, ಮೇ 26, 2019 (www.justkannada.in): ಚಾಮರಾಜನಗರ ಸಂಸದ ಆರ್.ಧೃವನಾರಾಯಣ್ ಅವರಿಗಾಗಿ ಪರಿಷತ್ ಸ್ಥಾನ ತ್ಯಜಿಸಲು ಮುಂದಾಗಿದ್ದಾರೆ ಧರ್ಮಸೇನಾ.

ಕಾಂಗ್ರೆಸ್’ಗೆ ಧೃವನಾರಾಯಣ್ ಸೇವೆ ಅಗತ್ಯವಿದೆ. ನನ್ನ ಸ್ಥಾನ ತ್ಯಜಿಸುವ ವಿಚಾರ ಸಿದ್ದರಾಮಯ್ಯ ಗಮನಕ್ಕೆ ತಂದಿಲ್ಲ. ಪಕ್ಷದ ಜಿಲ್ಲಾಧ್ಯಕ್ಷರಿಗೆ ನಾನು ನನ್ನ ನಿರ್ಧಾರ ತಿಳಿಸಿದ್ದೇನೆ. ದೇಶದಲ್ಲಿ ಎಲ್ಲೆಡೆ ಭಾರಿ ಬಹುಮತದಲ್ಲಿ ಗೆದ್ದರೂ ಚಾಮರಾಜನಗರದಲ್ಲಿ ಧೃವನಾರಾಯಣ್ ಭಾರಿ ಪೈಪೋಟಿ ನೀಡಿದ್ದಾರೆ ಎಂದು ಹೇಳಿದ್ದಾರೆ.

ನಾನು ಚುನಾಯಿತ ಪ್ರತಿನಿಧಿ, ಆದರೆ ಧೃವನಾರಾಯಣ್ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡವರು. ಉತ್ತಮ ಕೆಲಸ ಮಾಡಿ ಸೋತ ಧೃವನಾರಾಯಣ್ ಅಧಿಕಾರದಲ್ಲಿ ಇಲ್ಲದೆ ಇದ್ರೆ ಕಷ್ಟ. ಹೀಗಾಗಿ ನನ್ನ ಸ್ಥಾನವನ್ನು ಆರ್.ಧೃವನಾರಾಯಣ್ ಅವರಿಗೆ ಬಿಟ್ಟುಕೊಡುತ್ತೇನೆ ಎಂದಿದ್ದಾರೆ.