Tuesday, August 11, 2026

BDA Apartments

Home Front Page ರಣಜಿ ಟ್ರೋಫಿ ಕ್ರಿಕೆಟ್: ಫೈನಲ್ಸ್’ಗೆ ಸೌರಾಷ್ಟ್ರ

ರಣಜಿ ಟ್ರೋಫಿ ಕ್ರಿಕೆಟ್: ಫೈನಲ್ಸ್’ಗೆ ಸೌರಾಷ್ಟ್ರ

ರಾಜ್‌ಕೋಟ್‌, ಮಾರ್ಚ್ 05, 2020 (www.justkannada.in): ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ ಪಂದ್ಯ ದಲ್ಲಿ ಸೌರಾಷ್ಟ್ರ ತಂಡ 92 ರನ್‌ಗಳ ಜಯ ಸಾಧಿಸಿದೆ.

ನಾಯಕ ಜಯದೇವ ಉನದ್ಕತ್ ಅವರ ಬಿರು ಗಾಳಿ ವೇಗಕ್ಕೆ ಗುಜರಾತ್‌ನ ಕನಸು ನುಚ್ಚುನೂರಾಯಿತು. ಒಂದೇ ರಾಜ್ಯದ ಎರಡು ತಂಡಗಳ ನಡುವಿನ ಜಿದ್ದಾಜಿದ್ದಿಯ ಹೋರಾಟದ ಕೊನೆಯ ದಿನ ವಿಜಯದ ಮಾಲೆ ಅತ್ತಿಂದಿತ್ತ, ಇತ್ತಿಂದತ್ತ ಓಲಾಡಿತು. ಆದರೆ ಕೊನೆಗೆ ಗೆಲುವು ‘ಆತಿಥೇಯರ’ ‍‍ಪಾಲಾಯಿತು.

ಈ ಮೂಲಕ ಸೌರಾಷ್ಟ್ರ ಸತತ ಎರಡನೇ ಬಾರಿ ಮತ್ತು ಒಟ್ಟಾರೆ ನಾಲ್ಕನೇ ಬಾರಿ ಪ್ರಶಸ್ತಿ ಹಂತ ತಲುಪಿತು. ಮುಂದಿನ ಸೋಮವಾರ ಆರಂಭವಾ ಗಲಿರುವ ಫೈನಲ್‌ನಲ್ಲಿ ಈ ತಂಡ ಬಂಗಾಳವನ್ನು ಎದುರಿಸಲಿದೆ.