ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮಲತಾಯಿ ಧೋರಣೆ: 15ನೇ ಹಣಕಾಸಿನ ಆಯೋಗದಲ್ಲಿ ರಾಜ್ಯಕ್ಕೆ ಅನ್ಯಾಯ – ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಕಿಡಿ

ಮೈಸೂರು,ಫೆ,26,2020(www.justkannada.in):  ಅನುದಾನ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ಕೇಂದ್ರ ಸರ್ಕಾರದಿಂದ ತೆರಿಗೆ ಹಣದಲ್ಲಿ ರಾಜ್ಯಕ್ಕೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆರೋಪಿಸಿದರು.

ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಲಕ್ಷ್ಮಣ್, ರಾಜ್ಯದಿಂದ ಅಧಿಕ ತೆರಿಗೆ ಸಂಗ್ರಹ ಮಾಡಿ ಕೇವಲ 40% ಮಾತ್ರ ಅನುದಾನ ನೀಡುತ್ತಿದೆ. ಆದರೆ ಉತ್ತರ ಪ್ರದೇಶ, ಬಿಹಾರ ರಾಜ್ಯಗಳಿಗೆ ಅವರು ಸಂಗ್ರಹಿಸಿದ ತೆರಿಗೆಗಿಂತ ಶೇ80 ಪಟ್ಟು ಹೆಚ್ಚು ಅನುದಾನ ನೀಡುತ್ತಿದ್ದೆ. ಕೇಂದ್ರ ಬಿಜೆಪಿ ಸರ್ಕಾರ ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ. ದೇಶದಲ್ಲೇ ತೆರಿಗೆ ನೀಡುವುದರಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ಸಾಫ್ಟ್‌ವೇರ್ ಟೆಕ್ನಾಲಜಿಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಆದರೆ 15ನೇ ಹಣಕಾಸಿನ ಆಯೋಗದಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಗೆಯೇ 14ನೇ ಆಯೋಗದಲ್ಲಿ ರಾಜ್ಯಕ್ಕೆ 4.76 ರಷ್ಟು ಅನುದಾನ ನೀಡಲಾಗ್ತಿತ್ತು, ಆದರೆ ಈಗ 3.43 ಇಳಿಸಲಾಗಿದ್ದು, ರಾಜ್ಯಕ್ಕೆ ಒಂದು ವರ್ಷದಲ್ಲಿ ಸುಮಾರು 11,125 ಕೋಟಿ ಅನುದಾನ ಖೋತಾ ಮಾಡಲಾಗಿದೆ. ಭಾವನಾತ್ಮಕ ವಿಚಾರದಲ್ಲಿ ಬಿಜೆಪಿಯವರು ಜನರನ್ನ ದಾರಿ ತಪ್ಪಿಸುತ್ತಿದ್ದಾರೆ. ಇದನ್ನ ಬಿಟ್ಟು ಜನರ ಅಭಿವೃದ್ಧಿ ಕಡೆ ಗಮನ ಹರಿಸಿ. ಕರ್ನಾಟಕದಲ್ಲಿ ಹೆಚ್ಚು ಎಂಪಿಗಳನ್ನು ಗೆಲ್ಲಿಸಿ ಕಳುಹಿಸಿದ್ರೂ ಅನ್ಯಾಯ ಮಾಡಲಾಗ್ತಿದೆ. ಈ ಬಗ್ಗೆ ನಮ್ಮ ಬಿಜೆಪಿ ಶಾಸಕರು ಮತ್ತು ಸಂಸದರು ಧ್ವನಿ ಎತ್ತುತ್ತಿಲ್ಲ ಎಂದು ಲಕ್ಷ್ಮಣ್ ಅಸಮಾಧಾನ ವ್ಯಕ್ತಪಡಿಸಿದರು.

ತಳವಾರ, ಪರಿವಾರ ಸಮುದಾಯವನ್ನು ಎಸ್.ಟಿ ಗೆ ಸೇರ್ಪಡೆಯಾಗಿದ್ದು ಕಾಂಗ್ರೆಸ್ ಕೊಡುಗೆ. ಇದನ್ನ ಬಿಜೆಪಿ ತಮ್ಮ ಸಾಧನೆ ಎಂದು ಬಿಂಬಿಸುತ್ತಿದೆ. ಇದು ಅಂದಿನ ಸಿಎಂ ಸಿದ್ದರಾಮಯ್ಯ ಅವರ ಕಾಲದಲ್ಲಿ ನಡೆದ ಕಾರ್ಯ. ಆದ್ರೆ ಬಿಜೆಪಿ ನಾಯಕರು ತಮ್ಮ ಸಾಧನೆ ಎಂದು ಅಪ್ರಚಾರ ಮಾಡುತ್ತಿದ್ದಾರೆ. ಈ ವಿಷಯಕ್ಕೆ ಸಂಬಂದಿಸಿದಂತೆ ಒಂದು ಕಮಿಟಿ ರಚನೆ ಮಾಡಿ ಕಾರ್ಯರೂಪಕ್ಕೆ ತಂದಿದ್ದ ಕಾಂಗ್ರೆಸ್. ತಳವಾರ ಹಾಗೂ ಪರಿವಾರ ಜನಾಂಗದ ಜೊತಗೆ ಸಿದ್ದಿ ಜನಾಂಗವನ್ನು ಸಹ ಎಸ್.ಟಿಗೆ ಸೇರಿಸಲಾಗಿದೆ‌. ಸಂಸದ ಪ್ರತಾಪ್ ಸಿಂಹ ಇದರ ಬಗ್ಗೆ ಒಂದು ದಿನವೂ ಕೆಲಸ ಮಾಡಿಲ್ಲ. ಆದ್ರೂ ಪ್ರತಾಪ್ ಸಿಂಹ ಕಾಂಗ್ರೆಸ್ ನಾಯಕರ ಕೆಲಸವನ್ನ  ತಮ್ಮದೆಂದು ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಟೀಕಿಸಿದರು.

Key words: central government- Injustice – state -15th Finance Commission-mysore- KPCC spokesperson Laxman