Sunday, September 20, 2026

BDA Apartments

ವಿಶ್ವಕಪ್ ಕ್ರಿಕೆಟ್: ಇಂದು ಟೀಂ ಇಂಡಿಯಾ-ನ್ಯೂಜಿಲ್ಯಾಂಡ್ ಅಭ್ಯಾಸ ಪಂದ್ಯ BDA JK_Ad...
Home Front Page ವಿಶ್ವಕಪ್ ಕ್ರಿಕೆಟ್: ಇಂದು ಟೀಂ ಇಂಡಿಯಾ-ನ್ಯೂಜಿಲ್ಯಾಂಡ್ ಅಭ್ಯಾಸ ಪಂದ್ಯ

ವಿಶ್ವಕಪ್ ಕ್ರಿಕೆಟ್: ಇಂದು ಟೀಂ ಇಂಡಿಯಾ-ನ್ಯೂಜಿಲ್ಯಾಂಡ್ ಅಭ್ಯಾಸ ಪಂದ್ಯ

ಇಂಗ್ಲೆಂಡ್, ಮೇ 25, 2019 (www.justkannada.in): ಐಸಿಸಿ ವಿಶ್ವಕಪ್ ಟೂರ್ನಿಯ ಮೊದಲ ಅಭ್ಯಾಸ ಪಂದ್ಯದಲ್ಲಿ ಇಂದು ಟೀಂ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.

ದಿ ಓವೆಲ್ ಮೈದಾನದಲ್ಲಿ ಇಂದು ನಡೆಯಲಿರುವ ಈ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿನ ನಿರೀಕ್ಷೆಯಲ್ಲಿವೆ. ಲೀಗ್ ಪಂದ್ಯಗಳಿಗೂ ಮುನ್ನ ಕ್ಯಾಪ್ಟನ್ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾ ಆಟಗಾರರು ಭರ್ಜರಿ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.

ಇಂದಿನ ಅಭ್ಯಾಸ ಪಂದ್ಯದಲ್ಲಿ ಕೊಹ್ಲಿ, ಕುಲ್ ದೀಪ್ ಯಾದವ್ ಮತ್ತು ಯಜುವಿಂದ್ರ ಚಹಲ್, ಇಬ್ಬರು ಸ್ಪಿನ್ನರ್ ಗಳನ್ನು ಆಡಿಸುತ್ತಾರಾ ಅಥವಾ ಒಬ್ಬ ಸ್ಪಿನ್ನರ್ ರನ್ನು ಆಡಿಸುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.