ಮೈಸೂರಿನಲ್ಲಿ ಶಿವರಾತ್ರಿ ಹಬ್ಬದ ಸಂಭ್ರಮ: ತ್ರಿನೇಶ್ವರ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ: ಸ್ವಾಮಿಯ ದರ್ಶನ ಪಡೆದ ಭಕ್ತರು…

ಮೈಸೂರು,ಫೆ,21,2020(www.justkannada.in): ಇಂದು ನಾಡಿನೆಲ್ಲೆಡೆ ಮಹಾಶಿವರಾತ್ರಿ ಹಿನ್ನೆಲೆ ಮಂಜುನಾಥನ ಸ್ಮರಣೆ ಮಾಡಲಾಗುತ್ತಿದ್ದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಶಿವರಾತ್ರಿ ಸಂಭ್ರಮ ಮನೆ ಮಾಡಿದೆ.

ಶಿವರಾತ್ರಿ ಹಬ್ಬ ಹಿನ್ನೆಲೆ ಮೈಸೂರು ಅರಮನೆಯ ತ್ರಿನೇಶ್ವರಸ್ವಾಮಿ ದೇಗುಲದಲ್ಲಿ ಬೆಳಗ್ಗೆ 5.30 ನಿಮಿಷಕ್ಕೆ ಪೂಜಾ ಕೈಂಕರ್ಯ ಆರಂಭವಾಗುದ್ದು ತ್ರಿನೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ತ್ರಿನೇಶ್ವರ ಸ್ವಾಮಿ  ಚಿನ್ನದ ಕೊಳಗದ ಮೂಲಕ ದರುಶನ‌ ನೀಡಿದ್ದು ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.

ವರ್ಷಕ್ಕೊಂದು ಬಾರಿ ಮಾತ್ರ ಚಿನ್ನದ ಮುಖವಾಡ ಹಾಕಲಾಗುತ್ತದೆ.   ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹುಟ್ಟಿದ ದಿನದಂದು ನೀಡಿದ ಚಿನ್ನದ ಕೊಳಗ. 11ಕೆಜಿ ತೂಕ ಹೊಂದಿದೆ. ಗಂಗೆ, ನಾಗಭರಣ ಮತ್ತು ಜಟಾಮುಕುಟದಿಂದ ತ್ರಿನೇಶ್ವರ ಸ್ವಾಮಿ ಅಲಂಕೃತಗೊಂಡಿದ್ದು  ಶಿವದೇವಾಲಯಗಳಲ್ಲಿ ಭಕ್ತರ ದಂಡು ಆಗಮಿಸಿದೆ.

ಸುಳ್ವಾಡಿ ಮಾರಮ್ಮ ದೇಗುಲದ ಎಫೆಕ್ಟ್ ಹಿನ್ನೆಲೆ  ಈ ವರ್ಷವೂ ಪ್ರಸಾದ ತಪಾಸಣೆ ನಡೆಯಿತು.  ಮೈಸೂರು ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಜಯಂತ್‌  ಸ್ವತಹ ಪ್ರಸಾದ ಸೇವಿಸಿ  ತಪಾಸಣೆ ಮಾಡಿದರು. ಬಳಿಕ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು

Key words: mahashivaratri-mysore- palace-trineshwara swamy-temple