Monday, September 14, 2026

BDA Apartments

ಮಳವಳ್ಳಿ ತಾಲೂಕು ಹಲಗೂರಿನ ಬಾಬು ಹೋಟೆಲ್’ನಲ್ಲಿ ಉಪಹಾರ ಸವಿದ ಶಿವಣ್ಣ BDA JK_Adv BDA Adv
Home Cinema ಮಳವಳ್ಳಿ ತಾಲೂಕು ಹಲಗೂರಿನ ಬಾಬು ಹೋಟೆಲ್’ನಲ್ಲಿ ಉಪಹಾರ ಸವಿದ ಶಿವಣ್ಣ

ಮಳವಳ್ಳಿ ತಾಲೂಕು ಹಲಗೂರಿನ ಬಾಬು ಹೋಟೆಲ್’ನಲ್ಲಿ ಉಪಹಾರ ಸವಿದ ಶಿವಣ್ಣ

ಮಂಡ್ಯ, ಫೆಬ್ರವರಿ 11, 2020 (www.justkannada.in): ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇತ್ತೀಚೆಗೆ ಮಂಡ್ಯದ ತಮ್ಮ ನೆಚ್ಚಿನ ಹೋಟೆಲ್ ಗೆ ಭೇಟಿ ನೀಡಿ ಉಪಹಾರ ಸವಿದಿದ್ದಾರೆ.

ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿರುವ ಬಾಬು ಶೆಡ್ ಹೊಟೇಲ್ ಎಂದರೆ ಶಿವರಾಜ್‍ಕುಮಾರ್ ಅವರಿಗೆ ತುಂಬಾ ಇಷ್ಟ. ಈ ಭಾಗದಲ್ಲಿ ಹೋಗುವಾಗ ಈ ಹೊಟೇಲಿಗೆ ಶಿವಣ್ಣ ಮಿಸ್ ಮಾಡದೇ ಭೇಟಿ ಕೊಡುತ್ತಾರೆ.

ಇಲ್ಲಿ ಮಾಡುವ ದೋಸೆ, ಚಿತ್ರಾನ್ನ ಎಂದರೆ ಶಿವಣ್ಣ ಇಷ್ಟಪಟ್ಟು ತಿನ್ನುತ್ತಾರೆ.  ಶಿವರಾಜ್‍ಕುಮಾರ್ ಅವರು ಮುತ್ತತ್ತಿ, ಮಲೆಮಹದೇಶ್ವರಬೆಟ್ಟ, ಸಿಂಗನಲ್ಲೂರು, ಗಾಜನೂರು, ಮೈಸೂರು ಭಾಗಗಳಿಗೆ ಹೋಗುವ ವೇಳೆ ಇದೇ ರಸ್ತೆಯಲ್ಲಿ ಹೋಗುತ್ತಾರೆ.

ಹೋಗುವ ವೇಳೆ ತಮ್ಮ ಸ್ನೇಹಿತರೊಂದಿಗೆ ಹಾಗೂ ಕುಟುಂಬಸ್ಥರೊಂದಿಗೆ ಈ ಬಾಬು ಹೊಟೇಲ್‍ಗೆ ಹೋಗಿ ಇಲ್ಲಿ ತಯಾರಾಗುವ ತಿಂಡಿಯನ್ನು ಸವಿದಿದ್ದಾರೆ.