Tuesday, September 15, 2026

BDA Apartments

ನನ್ನ ಈ ಬೇಡಿಕೆ ಇನ್ನು ಈಡೇರಿಲ್ಲ- ನೂತನ ಸಚಿವ ಆನಂದ್ ಸಿಂಗ್ ಹೇಳಿಕೆ… BDA JK_Adv BDA Adv
Home Front Page ನನ್ನ ಈ ಬೇಡಿಕೆ ಇನ್ನು ಈಡೇರಿಲ್ಲ- ನೂತನ ಸಚಿವ ಆನಂದ್ ಸಿಂಗ್ ಹೇಳಿಕೆ…

ನನ್ನ ಈ ಬೇಡಿಕೆ ಇನ್ನು ಈಡೇರಿಲ್ಲ- ನೂತನ ಸಚಿವ ಆನಂದ್ ಸಿಂಗ್ ಹೇಳಿಕೆ…

ಬಳ್ಳಾರಿ,ಫೆ,7,2020(www.justkannada.in):  ನನಗೆ ಬರೀ ಮಂತ್ರಿ ಆಗುವ ಉದ್ದೇಶವಿರಲಿಲ್ಲ. ನನ್ನ ಬೇಡಿಕೆ ಇನ್ನು ಈಡೇರಿಲ್ಲ ಎಂದು ನೂತನ ಸಚಿವ ಆನಂದ್ ಸಿಂಗ್ ಹೇಳಿಕೆ ನೀಡಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಆನಂದ್ ಸಿಂಗ್ ನನಗೆ ಮಂತ್ರಿ ಆಗೋದೇ ಉದ್ದೇಶವಿರಲಿಲ್ಲ. ವಿಜಯನಗರ ಜಿಲ್ಲೆ ಆಗೋದು ನನ್ನ ಪ್ರಮುಖ ಬೇಡಿಕೆ ಈಗಾಗಿ ನನ್ನ ಬೇಡಿಕೆ ಇನ್ನು ಈಡೇರಿಲ್ಲ. ಈ ಬೇಡಿಕೆ ಈಡೇರಬೇಕು ಎಂದು  ಹೇಳಿದ್ದಾರೆ.

ಹಾಗೆಯೇ ಬಳ್ಳಾರಿ ಉಸ್ತುವಾರಿ ಸಚಿವ ಸ್ಥಾನ ಕುರಿತು ಪ್ರತಿಕ್ರಿಯಿಸಿದ ಸಚಿವ ಆನಂದ್ ಸಿಂಗ್, ನನಗೆ ಬಳ್ಳಾರಿ ಉಸ್ತುವಾರಿ ಸ್ಥಾನ ನೀಡಿದ್ರೆ ಸ್ವೀಕರಿಸುವೆ. ಆದರೆ ಸಚಿವ ಶ್ರೀರಾಮುಲು ಅವರಿಗೆ ಮೊದಲ ಆದ್ಯತೆ ನೀಡಲಿ ಎಂದು ಸ್ಪಷ್ಟನೆ ನೀಡಿದರು.

Key words: My demand – no – fulfilled-New Minister -Anand Singh