Wednesday, September 30, 2026

BDA Apartments

ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಪ್ರಿಯಾಂಕಾ… BDA JK_Adv BDA Adv
Home Cinema ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಪ್ರಿಯಾಂಕಾ…

ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಪ್ರಿಯಾಂಕಾ…

ಬೆಂಗಳೂರು,ಜ,27(www.justkannada.in):  . ಇನ್ನು ಒಂದು ವಾರವಷ್ಟೇ ಬಾಕಿ ಉಳಿದಿರುವಾಗ ಬಿಗ್ ಬಾಸ್ ಮನೆಯಿಂದ ಪ್ರಿಯಾಂಕಾ ಹೊರಬಂದಿದ್ದಾರೆ. ಮೊದಲಿನಿಂದಲೂ ಉತ್ತಮವಾಗಿ ಆಟವಾಡಿದ್ದರೆ ಫಿನಾಲೆವರೆಗೂ ಇರಬಹುದಿತ್ತು ಎಂದು ಅವರು ಹೇಳಿದ್ದಾರೆ.

ಬಿಗ್ ಬಾಸ್ ನಿಂದ ಪ್ರಿಯಾಂಕಾ ಹೊರಬಿದ್ದಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹಲವು ಪ್ರತಿಕ್ರಿಯೆ ಬರುತ್ತಿದೆ. ಕಳೆದ ಎರಡು ವಾರಗಳಿಂದ ಉತ್ತಮ ಪ್ರದರ್ಶನ ನೀಡಿದ ಬಗ್ಗೆ ಮಾತನಾಡಿದ ಪ್ರಿಯಾಂಕಾ ‘ಬಿಗ್ ಬಾಸ್’ ವೇದಿಕೆಯಲ್ಲಿ ಸುದೀಪ್ ಎದುರು ಮನೆಯೊಳಗಿನ ಅನುಭವ ಹಂಚಿಕೊಂಡಿದ್ದಾರೆ. ‘

105 ದಿನ ಮನೆಯೊಳಗೆ ಇದ್ದು ಖುಷಿಯ ಸಂಗತಿಯಾಗಿದೆ. ‘ಬಿಗ್ ಬಾಸ್’ನಿಂದ ಹೊರ ಹೋದ ಬಳಿಕ ಎಲ್ಲರ ಜೀವನ ಶೈಲಿ ಬದಲಾಗಿದೆ. ಎಲ್ಲರೂ ಬ್ಯುಸಿಯಾಗಿದ್ದಾರೆ. ಈ ವೇದಿಕೆಯಿಂದ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ತಂದೆಯನ್ನು ನೆನೆದು ಭಾವುಕರಾಗಿದ್ದಾರೆ.