ಸಿಎಎ ಪರ ಭಾಷಣ ಮಾಡಿದ್ದ ಮುಖಂಡರ ಹತ್ಯೆಗೆ ಸ್ಕೆಚ್ ವಿಚಾರ: ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಆಗಬೇಕು-ಸಚಿವ ಜಗದೀಶ್ ಶೆಟ್ಟರ್ ಆಗ್ರಹ…

ಬೆಂಗಳೂರು,ಜ,17,2020(www.justkannada.in): ಸಿಎಎ ಪರ ಭಾಷಣ ಮಾಡಿದ್ದ ಮುಖಂಡರ ಹತ್ಯೆಗೆ ಸ್ಕೆಚ್ ವಿಚಾರಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಆಗಬೇಕು ಎಂದು ಬೃಹತ್ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್,  ಸಮಾಜ ಘಾತುಕ ಕೆಲಸದಲ್ಲಿ ಎಸ್ ಡಿಪಿಐ ಭಾಗಿಯಾಗಿದೆ  ಈಗ ಅದು ಬಟಾಬಯಲಾಗಿದೆ. ಸಿಎಎ ಪರ ಭಾಷಣ ಮಾಡಿದ್ದವರ ಹತ್ಯೆಗೆ ಸ್ಕೇಚ್ ಹಾಕಿದ್ದವರ ಬಂಧನ ಸರಿಯಾದ ಕ್ರಮ. ಅದನ್ನ ಸ್ವಾಗತಿಸುತ್ತೇನೆ. ಎಸ್ ಡಿಪಿಐ ಬ್ಯಾನ್ ಮಾಡಬೇಕು.  ಕೇಂಧ್ರ ಸರ್ಕಾರ ಈ ಬಗ್ಗೆ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಎಸ್ ಡಿಪಿಐ ನಿಷೇಧ ಕೇಂದ್ರ ಸರ್ಕಾರ ಮಾಡಬೇಕಿರುವ ಕೆಲಸವಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರದಿಂದ ಶಿಫಾರಸ್ಸು ಮಾಡಬೇಕು. ಶಿಫಾರಸ್ಸು  ಮಾಡುವ ಬಗ್ಗೆ ಗೃಹಸಚಿವರ ಜತೆ ಚರ್ಚಿಸುತ್ತೇವೆ. ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಹಿಂದೆ ಈ ಸಂಘಟನೆಗಳ ಮೇಲೆ ಆರೋಪ ಇತ್ತು. ಈಗ ಸಾಕ್ಷಿ ಸಮೇತ ಬಂಧಿಸಿದ್ದಾರೆ. ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಆಗಬೇಕು ಎಂದು ಆಗ್ರಹಿಸಿದರು.

Key words: Minister-Jagadish Shettar –demands-ban-sdpi