ನಮ್ಮ ಕುಟುಂಬಕ್ಕೆ ಯಾವುದೇ ಸಮನ್ಸ್ ನೀಡಿಲ್ಲ- ಇಡಿ ವಿಚಾರಣೆ ಬಳಿಕ ಮಾಜಿ ಸಚಿವ ಕೆ.ಜೆ ಜಾರ್ಜ್ ಹೇಳಿಕೆ…

ಬೆಂಗಳೂರು,ಜ,16,2020(www.justkannada.in):  ಅಕ್ರಮ ಆಸ್ತಿ ಗಳಿಕೆ ಮತ್ತು ವಿದೇಶದಲ್ಲಿ ಮಗನ ಹೆಸರಿನಲ್ಲಿ ಹೂಡಿಕೆ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಮಾಜಿ ಸಚಿವ ಕೆ.ಜೆ ಜಾರ್ಜ್ ಅವರ ವಿಚಾರಣೆ ಮುಕ್ತಾಯವಾಗಿದೆ.

ವಿದೇಶದಲ್ಲಿ ಮಗನ ಹೆಸರಿನಲ್ಲಿ ಹೂಡಿಕೆ ಮಾಡಿದ ಆರೋಪದಲ್ಲಿ ವಿಚಾರಣೆಗ ಹಾಜರಾಗುವಂತೆ ಇಡಿ ಸಮನ್ಸ್ ನೀಡಿದ ಹಿನ್ನೆಲೆ ಮಾಜಿ ಸಚಿವ ಕೆ.ಜೆ ಜಾರ್ಜ್ ಇಂದು ವಿಚಾರಣೆಗೆ ಹಾಜರಾಗಿದ್ದರು. ಬೆಂಗಳೂರಿನ ಶಾಂತಿ ನಗರದಲ್ಲಿರುವ ಇಡಿ ಕಚೇರಿಯಲ್ಲಿ ವಿಚಾರಣೆ ನಡೆಯಿತು.

ಸತತ ನಾಲ್ಕುಗಂಟೆಗಳ ಕಾಲ ಮಾಜಿ ಸಚಿವ ಕೆ.ಜೆ ಜಾರ್ಜ್ ವಿಚಾರಣೆ ಎದುರಿಸಿದರು. ವಿಚಾರಣೆ ಬಳಿಕ ಮಾತನಾಡಿದ ಕೆ.ಜೆ ಜಾರ್ಜ್, ನಮ್ಮ ಕುಟುಂಬಕ್ಕೆ ಯಾವುದೇ ಸಮನ್ಸ್ ಜಾರಿಯಾಗಿಲ್ಲ. ಯಾವುದೇ ಆಪಾದನೆ ಬಂದ ತಕ್ಷಣ ತಪ್ಪಿತಸ್ಥನಾಗಲ್ಲ. ಇಡಿ ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಅವಶ್ಯಕತೆ ಇದ್ದರೇ ವಿಚಾರಣೆಗೆ ಕರೀತಾರೆ ಬರ್ತೀನಿ ಎಂದರು.

ಇಡಿ ಏನೇ ದಾಖಲೆ ಕೇಳದ್ರೂ ಕೊಡಲು ಸಿದ್ಧ. ವಿಚಾರಣೆ ವೇಳೆ ಹೆಚ್ಚಿನ ದಾಖಲೆ ಕೇಳಿದ್ದಾರೆ. ಮುಂದಿನ ದಿನಗಳಲ್ಲಿ ದಾಖಲೆಗಳನ್ನ ಕೊಡುತ್ತೇವೆ ಎಂದು ಕೆ.ಜೆ ಜಾರ್ಜ್ ತಿಳಿಸಿದರು.

Key words: Former minister- KJ George- after- ED hearing