Friday, September 18, 2026

BDA Apartments

ಸ್ವಾಮೀಜಿಗಳು ಈ ರೀತಿ ಒತ್ತಡ ಹಾಕುವುದು ಸರಿಯಲ್ಲ- ಸಿಎಂ ಬಿಎಸ್ ವೈ ಪರ ಬ್ಯಾಟ್ ...
Home Front Page ಸ್ವಾಮೀಜಿಗಳು ಈ ರೀತಿ ಒತ್ತಡ ಹಾಕುವುದು ಸರಿಯಲ್ಲ- ಸಿಎಂ ಬಿಎಸ್ ವೈ ಪರ ಬ್ಯಾಟ್ ಬೀಸಿದ...

ಸ್ವಾಮೀಜಿಗಳು ಈ ರೀತಿ ಒತ್ತಡ ಹಾಕುವುದು ಸರಿಯಲ್ಲ- ಸಿಎಂ ಬಿಎಸ್ ವೈ ಪರ ಬ್ಯಾಟ್ ಬೀಸಿದ ಕೈ ಮುಖಂಡ ದಿನೇಶ್ ಗುಂಡೂರಾವ್…

ಬೆಂಗಳೂರು,ಜ,15,2020(www.justkannada.in):  ನಮ್ಮ ಸಮುದಾಯ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದರೆ ಪಂಚಮಸಾಲಿ ಸಮುದಾಯ ನಿಮ್ಮ ಕೈ ಬಿಡುತ್ತದೆ  ಎಂದು ಸಿಎಂ ಬಿಎಸ್ ಯಡಿಯೂರಪ್ಪಗೆ ಸ್ವಾಮೀಜಿ ಎಚ್ಚರಿಕೆ ನೀಡಿದ  ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಿಎಸ್ ವೈ ಪರ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್  ಬ್ಯಾಟಿಂಗ್ ಮಾಡಿದ್ದಾರೆ.

ಒಂದು ಸಮಾಜ ನಿಮ್ಮ ಕೈಬಿಡುತ್ತೆ ಎಂದು ಹೇಳಬಾರದಿತ್ತು. ಹರ ಜಾತ್ರೆಯಲ್ಲಿ ಸ್ವಾಮೀಜಿ ಹಾಗೆ ಮಾತನಾಢಿದ್ದು ತಪ್ಪು. ಸಹಜವಾಗಿ ಬಿಎಸ್ ಯಡಿಯೂರಪ್ಪ ಸ್ವಾಮೀಜಿಗಳ ಮಾತಿನಿಂದ ಕೆರಳಿದ್ದಾರೆ ಎಂದು ದಿನೇಶ್ ಗುಂಡೂರಾವ್ ಸ್ವಾಮೀಜಿಗಳ ನಡೆಯನ್ನ ಖಂಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ದಿನೇಶ್ ಗುಂಡೂರಾವ್, ಸ್ವಾಮೀಜಿ ಈ ರೀತಿ ಒತ್ತಡ ಹಾಕುವುದು ಸರಿಯಲ್ಲ ಇಂತಹ ಒತ್ತಡಗಹಳಿಂದ ರಾಜ್ಯ ಅಭಿವೃದ್ದಿಯಾಗಲ್ಲ. ಒತ್ತಡ ಹಾಕಿದ ಹಿನ್ನೆಲೆ ಸಿಎಂ ಬಿಎಸ್ ವೈ ಸಹಜವಾಗಿ ಗರಂ ಆಗಿದ್ದಾರೆ. ಅಧಿವೇಶನ ಸಹ ಪೂರ್ಣಪ್ರಮಾಣದಲ್ಲಿ ನಡೆದಿಲ್ಲ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು. .

ಹರಿಹರ ತಾಲೂಕಿನ ವೀರಶೈವ ಲಿಂಗಾಯತ ಪಂಚಮಸಾಲಿ ಮಠದಲ್ಲಿ ಹರ ಜಾತ್ರೆ ನಡೆಯುತ್ತಿದ್ದು ಈ ವೇಳೆ ವೇದಿಕೆ ಮೇಲೆಯೇ ಶ್ವಾಸ ಗುರು ವಚನಾನಂದ ಸ್ವಾಮೀಜಿ ಅವರು  ತಮ್ಮ ಸಮುದಾಯಕ್ಕೆ ಸಚಿವ ಸ್ಥಾನ ನೀಡಬೇಕು, ಇಲ್ಲದಿದ್ದರೆ ಪಂಚಮಸಾಲಿ ಸಮುದಾಯ ನಿಮ್ಮ ಕೈ ಬಿಡುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದರಿಂದ ಕೋಪಗೊಂಡ ಸಿಎಂ ಬಿ.ಎಸ್ ಯಡಿಯೂರಪ್ಪ ಕುರ್ಚಿಯಿಂದ ಮೇಲೆದ್ದು ನೀವು ಹೀಗೆಲ್ಲಾ ಮಾತನಾಡಬಾರದು. ನೀವು ಸಲಹೆ ನೀಡಬೇಕೇ ಹೊರತು, ಬೆದರಿಕೆ ಹಾಕಬಾರದು ಎಂದರು. ಸ್ವಾಮೀಜಿಗಳು ಬೆದರಿಕೆ ಹಾಕಬಾರದು, ಸಲಹೆಯನ್ನು ಮಾತ್ರ ನೀಡಬೇಕು. ನನ್ನ ಪರಿಸ್ಥಿತಿ ನೀವು ಅರ್ಥ ಮಾಡಿಕೊಳ್ಳಬೇಕು ಎಂದರು.

Key words: not right – Swamijis – pressure –congress leader-Dinesh Gundurao – batting – CM BS yeddyurappa