Saturday, August 1, 2026

BDA Apartments

Home Front Page ಸಿದ್ದರಾಮಯ್ಯ ಬಗ್ಗೆ ಹೇಳಿಕೆ ನೀಡಿದ್ದ  ಹೆಚ್.ವಿಶ್ವನಾಥ್ ಹಾಗೂ ರೋಷನ್ ಬೇಗ್ ವಿರುದ್ದ ಕಿಡಿಕಾರಿದ ಮಾಜಿ ಸಚಿವ...

ಸಿದ್ದರಾಮಯ್ಯ ಬಗ್ಗೆ ಹೇಳಿಕೆ ನೀಡಿದ್ದ  ಹೆಚ್.ವಿಶ್ವನಾಥ್ ಹಾಗೂ ರೋಷನ್ ಬೇಗ್ ವಿರುದ್ದ ಕಿಡಿಕಾರಿದ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ..

ಮೈಸೂರು,ಮೇ,22,2019(www.justkannada.in):  ಸಿದ್ದರಾಮಯ್ಯ ವಿರುದ್ದ ಸಮನ್ವಯ ಸಮಿತಿ ಅಧ್ಯಕ್ಷರಾಗಿ ವಿಫಲರಾಗಿದ್ದಾರೆ ಎಂದು ಹೇಳಿಕೆ ನೀಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ವಿರುದ್ದ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಕಿಡಿಕಾರಿದ್ದಾರೆ.

ಕಳ್ಳನ ಮನಸ್ಸು ಹುಳ್ಳುಳ್ಳಗೆ  ಅಂತಾರಲ್ಲ ಹಾಗೆ. ವಿಶ್ವನಾಥ್ ಅವ್ರು ಹಿರಿಯ ನಾಯಕರಿದ್ದಾರೆ. ಈ ರೀತಿ ಹೇಳಿಕೆಯನ್ನ ಕೊಡಬಾರದು ಎಂದು ಮಾಜಿ ಸಚಿವ ಹೆಚ್.ಸಿಮಹದೇವಪ್ಪ ಟಾಂಗ್ ಕೊಟ್ಟಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಹೆಚ್.ಸಿ ಮಹದೇವಪ್ಪ, ವಿಶ್ವನಾಥ್ ಹಿರಿಯರು. ಅವರು ಪಕ್ಷವನ್ನ ಒಗ್ಗೂಡಿಸುವ ಕೆಲಸ ಮಾಡಬೇಕು. ಅದನ್ನ ಬಿಟ್ಟು ಈ ರೀತಿಯ ಹೇಳಿಕೆ ಕೊಡಬಾರದು ಎಂದರು.

ರೋಷನ್ ಬೇಗ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಹೆಚ್.ಸಿ ಮಹದೇವಪ್ಪ, ರೋಷನ್ ಬೇಗ್ ಯಾವ ಉದ್ದೇಶ ಇಟ್ಟುಕೊಂಡಿ ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ. ಸಿದ್ದರಾಮಯ್ಯ ದಕ್ಷ ನಿಷ್ಠಾವಂತ ನಾಯಕ. ರೋಷನ್ ಬೇಗ್ ಹಿರಿಯ ನಾಯಕರು. ಸಿದ್ದರಾಮಯ್ಯ ಜೊತೆಗೆ ಅಧಿಕಾರ ಅನುಭವಿಸಿದವರು. ಈಗ ರಾಜಕೀಯ ದುರುದ್ದೇಶದಿಂದ ಈ ರೀತಿ ಹೇಳಿಕೆ‌ ನೀಡಿದ್ದಾರೆ. ರೋಷನ್ ಬೇಗ್ ಮನಸಿನಲ್ಲಿ ಏನಿದೆ ಎಂದು ಅವರನ್ನೆ ಕೇಳಬೇಕು. ರಾಜಕೀಯದಲ್ಲಿ ಯಾವ ಸಂದರ್ಭದಲ್ಲಿ ಏನಾಗುತ್ತೆ ಗೊತ್ತಾಗಲ್ಲ‌. ಯಾರು ಎಲ್ಲೋಗುತ್ತಾರೆ ಎಂದು ತಿಳಿಯುವುದಿಲ್ಲ ಎಂದರು.

ಚುನಾವಣೋತ್ತರ ಸಮೀಕ್ಷೆ ಬಗ್ಗೆ ಪ್ರತಿಕ್ರಿಯಿಸಿದ ಹೆಚ್.ಸಿ ಮಹದೇವಪ್ಪ, ಎಲ್ಲಾ ಸಮೀಕ್ಷೆಗಳನ್ನು ನಂಬಲು  ಆಗಲ್ಲ. ಸಮೇಕ್ಷೆಗಿಂತ‌ ನಮಗೆ ಜನರ ನಾಡಿಮಿಡಿತ ಮುಖ್ಯ. ನಾಳೆ ಎಲ್ಲಾ ಸಮೀಕ್ಷೆಗಳಿಗೆ ಉತ್ತರ ಸಿಗಲಿದೆ. ನಾನು ಹಿಂದನೂ ಹೇಳಿದ್ದೇ ಈಗಲೂ ಹೇಳುತ್ತೇನೆ. ಕರ್ನಾಟಕದಲ್ಲಿ 16 ರಿಂದ 18 ಸೀಟಿಗಳನ್ನ ಗೆಲ್ಲುತ್ತೇವೆ ಹೆಚ್.ಸಿ ಮಹದೆವಪ್ಪ ವಿಶ್ವಾಸ ವ್ಯಕ್ತಪಡಿಸಿದರು.

Key words: Former Minister HC Mahadevappa outrage against HVVishwanath and Roshan Beg..

#politicalnews #hcmahadevappa #hvishwanath #roshanbeg