Thursday, September 17, 2026

BDA Apartments

Home Front Page ಮಂಗಳೂರು ಗೋಲಿಬಾರ್ ವಿಚಾರ: ಸರ್ಕಾರದಿಂದಲೇ ಅಧಿಕೃತವಾಗಿ ವಿಡಿಯೋ ಬಿಡುಗಡೆ ಮಾಡಲಿ –  ಪರಿಷತ್ ಸದಸ್ಯ ಎಸ್....

ಮಂಗಳೂರು ಗೋಲಿಬಾರ್ ವಿಚಾರ: ಸರ್ಕಾರದಿಂದಲೇ ಅಧಿಕೃತವಾಗಿ ವಿಡಿಯೋ ಬಿಡುಗಡೆ ಮಾಡಲಿ –  ಪರಿಷತ್ ಸದಸ್ಯ ಎಸ್. ಎಲ್ ಬೋಜೇಗೌಡ  ಆಗ್ರಹ

ಬೆಂಗಳೂರು,ಜ,11,2020(www.justkannada.in): ಕಳೆದ ಡಿಸೆಂಬರ್ 19 ರಂದು  ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಬೆಳಿಗ್ಗೆ 9ರಿಂದ ಗೋಲಿಬಾರ್ ನಡೆಯುವವರೆಗೆ  ನಡೆದ ಎಲ್ಲ ವಿದ್ಯಮಾನಗಳ ದೃಶ್ಯಾವಳಿಗಳನ್ನು ಸರ್ಕಾರ ತಕ್ಷಣವೇ ಅಧಿಕೃತವಾಗಿ ಬಿಡುಗಡೆ ಮಾಡುವಂತೆ  ವಿಧಾನಪರಿಷತ್ ಸದಸ್ಯ ಎಸ್. ಎಲ್ .ಬೋಜೇಗೌಡ  ಆಗ್ರಹಿಸಿದ್ದಾರೆ.

ಜನತಾದಳ ಜಾತ್ಯತೀತ ಪಕ್ಷದ ನಾಯಕ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ಸಿಡಿ  ಕಟ್ ಅಂಡ್ ಪೇಸ್ಟ್,  ಎಂದು ಮುಖ್ಯಮಂತ್ರಿ ಹೇಳಿರುವುದನ್ನು ಎಂಎಲ್ ಸಿ ಬೋಜೇಗೌಡ ತೀವ್ರವಾಗಿ ಖಂಡಿಸಿದ್ದಾರೆ.

ಮಂಗಳೂರಿನಲ್ಲಿ ಗೋಲಿಬಾರ್ ದಿನ ನಡೆದ ಬೆಳಗ್ಗೆ 9ರಿಂದ ಸಂಜೆ  ತನಕದ  ಸಿಸಿಟಿವಿ ದೃಶ್ಯಾವಳಿಗಳನ್ನು  ಮಂಗಳೂರು ಪೊಲೀಸ್ ಕಮಿಷನರ್ ಹಾಗೂ ರಾಜ್ಯ ಸರ್ಕಾರ ತಕ್ಷಣ ಬಿಡುಗಡೆ ಮಾಡಲಿ. ಸತ್ಯಾಸತ್ಯತೆ ಬಯಲಾಗುತ್ತದೆ  ಎಂದು ಒತ್ತಾಯಿಸಿದ್ದಾರೆ.

Key words: Mangalore Goalibar –officially- release – video – government-S L .Bojegauda