Wednesday, August 19, 2026

BDA Apartments

Home Cinema ಟ್ವಿಟ್ಟರ್’ನಲ್ಲಿ ಪುತ್ರನ ಬಗ್ಗೆ ಅಸಭ್ಯ ಕಾಮೆಂಟ್ ಮಾಡಿದವನಿಗೆ ಜಾಡಿಸಿದ ಸುಮಲತಾ

ಟ್ವಿಟ್ಟರ್’ನಲ್ಲಿ ಪುತ್ರನ ಬಗ್ಗೆ ಅಸಭ್ಯ ಕಾಮೆಂಟ್ ಮಾಡಿದವನಿಗೆ ಜಾಡಿಸಿದ ಸುಮಲತಾ

ಬೆಂಗಳೂರು, ಜನವರಿ 06, 01, 2020 (www.justkannada.in): ಪುತ್ರ ಅಭಿಷೇಕ್ ಅಂಬರೀಶ್ ಬಗ್ಗೆ ಟ್ವಿಟರ್ ಪೇಜ್ ನಲ್ಲಿ ಅವಹೇಳನಕಾರಿಯಾಗಿ ಬರೆದ ವ್ಯಕ್ತಿಯೊಬ್ಬನಿಗೆ ಸುಮಲತಾ ಅಂಬರೀಶ್ ಜಾಡಿಸಿದ್ದಾರೆ.

ಪುತ್ರನ ಹೊಸ ಲುಕ್ ಒಂದರ ಬಗ್ಗೆ ಪತ್ರಿಕೆಯೊಂದರಲ್ಲಿ ಬಂದಿದ್ದ ಲೇಖನವನ್ನು ಸುಮಲತಾ ಟ್ವೀಟ್ ಮಾಡಿದ್ದರು. ಇದರಲ್ಲಿ ಅಭಿಷೇಕ್ ಲುಕ್ ಬಗ್ಗೆ ಹೊಗಳಲಾಗಿತ್ತು. ಆದರೆ ಇದರ ಬಗ್ಗೆ ವ್ಯಕ್ತಿಯೊಬ್ಬ ಕೆಟ್ಟದಾಗಿ ಕಾಮೆಂಟ್ ಮಾಡಿದ್ದ.

ಇದರಿಂದ ಆಕ್ರೋಶಗೊಂಡ ಸುಮಲತಾ, ಹೇಗೆ ಮಾತನಾಡಬೇಕು, ಹೇಗೆ ನಡೆದುಕೊಳ್ಳಬೇಕು ಎಂದು ಗೊತ್ತಿಲ್ಲದ ನಿನ್ನಂತಹವರಿಂದಾಗಿಯೇ ಸೋಷಿಯಲ್ ಮೀಡಿಯಾ ಹಾಳಾಗುತ್ತಿದೆ ಎಂದು ಸರಿಯಾಗಿ ಟಾಂಗ್ ಕೊಟ್ಟಿದ್ದಾರೆ.