Monday, August 3, 2026

BDA Apartments

Home Cinema ಡಾ.ವಿಷ್ಣು ಅವರ 10ನೇ ಪುಣ್ಯಸ್ಮರಣೆ: ಇನ್ನೊಂದು ವಾರದಲ್ಲಿ ಸ್ಮಾರಕ ನಿರ್ಮಾಣ ಕಾರ್ಯ ಆರಂಭ-ಪೂಜೆ ಸಲ್ಲಿಸಿ ಭಾರತಿ...

ಡಾ.ವಿಷ್ಣು ಅವರ 10ನೇ ಪುಣ್ಯಸ್ಮರಣೆ: ಇನ್ನೊಂದು ವಾರದಲ್ಲಿ ಸ್ಮಾರಕ ನಿರ್ಮಾಣ ಕಾರ್ಯ ಆರಂಭ-ಪೂಜೆ ಸಲ್ಲಿಸಿ ಭಾರತಿ ವಿಷ್ಣುವರ್ಧನ್ ಹೇಳಿಕೆ…

ಮೈಸೂರು,ಡಿ,30,2019(www.justkannada.in):  ಇನ್ನೊಂದು ವಾರದಲ್ಲಿ ಸ್ಮಾರಕ ಜಾಗದಲ್ಲಿ ಡಾ.ವಿಷ್ಣು ಸ್ಮಾರಕ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ತಿಳಿಸಿದರು.

ಇಂನಟ ಸಾಹಸಸಿಂಹ  ಡಾ.ವಿಷ್ಣುವರ್ಧನ್ ಅವರು ನಮ್ಮನ್ನ ಅಗಲಿ ಇಂದಿಗೆ 10 ವರ್ಷ. ಡಾ.ವಿಷ್ಣು ಅವರ 10ನೇ ಪುಣ್ಯಸ್ಮರಣೆ ಹಿನ್ನೆಲೆ ವಿಷ್ಣು ಸಮಾಧಿ ಸ್ಥಳದಲ್ಲಿ ವಿಷ್ಣು ಭಾವಚಿತ್ರಕ್ಕೆ ಭಾರತಿ ವಿಷ್ಣುವರ್ಧನ್ ಅವರು ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು. ಈ ವೇಳೆ ನೂರಾರು ಅಭಿಮಾನಿಗಳು ವಿಷ್ಣುಪರ ಜೈಕಾರ ಹಾಕಿದರು.

ವಿಷ್ಣು ಸ್ಮರಣೆ ಅಂಗವಾಗಿ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಸೇರಿ ಹಲವು ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಈ ವೇಳೆ ಮಾತನಾಡಿದ  ಭಾರತಿ ವಿಷ್ಣುವರ್ಧನ್,  ಹತ್ತು ವರ್ಷಗಳ ನಂತರ ಒಳ್ಳೆಯದು ಆಗುತ್ತಿದೆ. ವಿಷ್ಣು ಸತ್ತು ಹತ್ತು ವರ್ಷಗಳಾಗಿವೆ. ಆದರೆ ಅಭಿಮಾನಿಗಳ‌ ಪ್ರೀತಿ, ವಿಶ್ವಾಸ ಕಡಿಮೆಯಾಗಿಲ್ಲ. ಅವರ ಘನತೆಗೆ ಯಾವುದೇ ಧಕ್ಕೆಯಾಗಿಲ್ಲ. ವಿಷ್ಣು ಇನ್ನು ನಮ್ಮೊಂದಿಗೆ ಇದ್ದಾರೆ.  ಸ್ಮಾರಕ ವಿಷ್ಣು ಅವರ ಕನಸು. ಸ್ಮಾರಕ ಜಾಗದಲ್ಲಿ ಜನಪರ ಕೆಲಸಗಳಾಬೇಕು ಎಂಬುದು ಅವರ ಬಯಕೆಯಾಗಿತ್ತು. ಕಟ್ಟಡದ ರೂಪುರೇಷೆ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು. ಸಿಎಂ ಯಡಿಯೂರಪ್ಪ ಅವರೂ ಸ್ಮಾರಕ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಹಾಯ ನೀಡುವ ಭರವಸೆ ನೀಡಿದ್ದಾರೆ. ಇನ್ನೊಂದು ವಾರದಲ್ಲಿ ಸ್ಮಾರಕ ಜಾಗದಲ್ಲಿ  ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದರು.

Key words: 10th – Remembrance.- Dr. Vishnuvardhan-mysore- worship- Monument- construction -Bharati VishnuVardhan