Wednesday, July 29, 2026

BDA Apartments

Home Front Page ಹಿಂದೂ ಮುಸ್ಲೀಂರನ್ನ ದೂರ ಮಾಡಲು ಯತ್ನ: ಗಲಭೆಗೆ ಕಾಂಗ್ರೆಸ್ ಕಾರಣ ಎಂಬುದು  ಬಯಲಾಗಿದೆ- ಸಚಿವ ಕೆ.ಎಸ್...

ಹಿಂದೂ ಮುಸ್ಲೀಂರನ್ನ ದೂರ ಮಾಡಲು ಯತ್ನ: ಗಲಭೆಗೆ ಕಾಂಗ್ರೆಸ್ ಕಾರಣ ಎಂಬುದು  ಬಯಲಾಗಿದೆ- ಸಚಿವ ಕೆ.ಎಸ್ ಈಶ್ವರಪ್ಪ ಕಿಡಿ…

ಬೆಂಗಳೂರು,ಡಿ,24,2019(www.justkannada.in):   ಮಂಗಳೂರಿನಲ್ಲಾದ ಗಲಭೆಗೆ ಪೊಲೀಸರು ಸರ್ಕಾರ ಕಾರಣವಲ್ಲ ಗೂಂಡಾಗಳು ಕುತಂತ್ರಿಗಳು  ಹಿಂಸಾಚಾರಕ್ಕೆ ಕಾರಣ. ಗಲಭೆಗೆ ಕಾಂಗ್ರೆಸ್ ಕಾರಣ ಎಂಬುದು ಹೊರ ಬಂದಿದೆ ಎಂದು  ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ  ಸಚಿವ ಕೆ.ಎಸ್ ಈಶ್ವರಪ್ಪ,  ಕಲ್ಲುತೂರಾಟ ದೃಶ್ಯವನ್ನ ಬಿಡುಗಡೆ ಮಾಡಲಾಗಿದೆ. ಕಾಂಗ್ರೆಸ್ ನವರ ಕುತಂತ್ರ ರಾಜಕಾರಣ ಬಟಾ ಬಯಲಾಗಿದೆ.   ಮುಸ್ಲೀಂರನ್ನ ದಾರಿ ತಪ್ಪಿಸಿ ಗಲಭೆ ಸೃಷ್ಠಿಸೋದು ಎಷ್ಟು ಸರಿ. ಕಾಂಗ್ರೆಸ್ ನವರಿಗೆ ಪ್ರಶ್ನಿಸುತ್ತೇನೆ ಇನ್ನೆಷ್ಟು ಸಾವು ಬೇಕು ಎಂದು ಕಿಡಿಕಾರಿದರು.

ಹಿಂದೂ ಮತ್ತು ಮುಸ್ಲೀಮರನ್ನು ದೂರ ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದ್ದು, ಈ ಯತ್ನದಲ್ಲಿ ಕಾಂಗ್ರೆಸ್ ಯಶಸ್ಸು ಕಾಣುವುದಿಲ್ಲ. ಆಗ ಬ್ರಿಟೀಷರು ಭಾರತವನ್ನು ಒಡೆದರು. ಇದೀಗ ಕಾಂಗ್ರೆಸ್ ನವರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಮುಂದಿಟ್ಟುಕೊಂಡು ಹಿಂದೂ ಮತ್ತು ಮುಸ್ಲೀಮರನ್ನು ದೂರ ಮಾಡಲು ಯತ್ನಿಸುತ್ತಿದ್ದಾರೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಆರೋಪಿಸಿದರು.

ಗಲಾಟೆ ಮಾಡಲು ವ್ಯವಸ್ಥಿತ ಸಂಜು ರೂಪಿಸಿದ್ದ ಬಗ್ಗೆ ದೃಶ್ಯಾವಳಿಯಲ್ಲಿ ಬಯಲಾಗಿದೆ. ಆದರೆ ಇದನ್ನ ವಿರೋಧಿಸಿದ್ದ ಸಿದ್ದರಾಮಯ್ಯ ಹೆಚ್.ಡಿ ಕುಮಾರಸ್ವಾಮಿ ಜನರ ಬಳಿ ಕ್ಷಮೆ ಕೇಳಬೇಕು. ಜನರನ್ನ ಎತ್ತಿಕಟ್ಟುವ ಕೆಲಸ ಬಿಡಬೇಕು. ಕಾಂಗ್ರೆಸ್ ನವರು ಕುತಂತ್ರ ರಾಜಕಾರಣ ಬಿಡಬೇಕು. ಇಲ್ಲದಿದ್ದರೇ ಇನ್ನಷ್ಟು ಅನುಭವಿಸಬೇಕಾಗುತ್ತದೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಸಲಹೆ ನೀಡಿದರು.

Key words: Hindu –Muslim-Congress – responsible – riots-Minister- KS Eshwarappa