Sunday, August 9, 2026

BDA Apartments

Home Cinema ಕಿಚ್ಚನಿಗೆ ತಮಿಳು ಸಿನಿಮಾದಲ್ಲಿ ‘ವಿಲನ್’ ಆಫರ್ !

ಕಿಚ್ಚನಿಗೆ ತಮಿಳು ಸಿನಿಮಾದಲ್ಲಿ ‘ವಿಲನ್’ ಆಫರ್ !

ಚೆನ್ನೈ, ಡಿಸೆಂಬರ್ 23, 2019 (www.justkannada.in): ತಮಿಳು ನಟ ಸಿಂಬು ಅಭಿನಯದ ಸಿನಿಮಾವೊಂದರಲ್ಲಿ ವಿಲನ್ ಪಾತ್ರ ಮಾಡಲು ಸುದೀಪ್ ಗೆ ಆಫರ್ ಬಂದಿದೆ.

ಕಟ್ ಪ್ರಭು ಅವರ ‘ಮಾನಾಡು’ ಸಿನಿಮಾದಲ್ಲಿ ಸಿಂಬುಗೆ ಖಳನಾಗಿ ಸುದೀಪ್ ರನ್ನು ಕರೆತರಲು ಚಿತ್ರತಂಡ ಪ್ರಯತ್ನ ನಡೆಸಿದೆ ಎನ್ನಲಾಗಿದೆ. ದಬಾಂಗ್ 3 ಸಿನಿಮಾದಲ್ಲಿ ಸಲ್ಮಾನ್ ಖಾನ್ ಎದುರು ಖಳನಾಯಕನ ಪಾತ್ರ ಮಾಡಿ ಭಾರೀ ಮೆಚ್ಚುಗೆಗೆ ಪಾತ್ರವಾಗಿರುವ ಕಿಚ್ಚ ಸುದೀಪ್ ಗೆ ಈಗ ಮತ್ತೊಂದು ಅಂತಹದ್ದೇ ಆಫರ್ ಬಂದಿದೆ ಎನ್ನಲಾಗಿದೆ.

ಆದರೆ ಇನ್ನೂ ಸುದೀಪ್ ಸ್ಕ್ರಿಪ್ಟ್ ಕೇಳಿಲ್ಲ. ಹಾಗೂ ಸಿನಿಮಾದಲ್ಲಿ ನಟಿಸುವುದಕ್ಕೆ ಒಪ್ಪಿಗೆಯನ್ನೂ ನೀಡಿಲ್ಲ ಎನ್ನಲಾಗಿದೆ. ಉತ್ತಮ ಕತೆ, ಚಿತ್ರತಂಡವಿದ್ದರೆ ವಿಲನ್ ಪಾತ್ರವಾದರೂ ಮಾಡಲು ನನಗೆ ಹಿಂಜರಿಕೆಯಿಲ್ಲ ಎಂದು ಸುದೀಪ್ ಹೇಳಿದ್ದರು.