Friday, September 25, 2026

BDA Apartments

Home Cinema ಕಿರುತೆರೆಯಲ್ಲಿ ‘ಪೈಲ್ವಾನ್’ ಪಟ್ಟು ನೋಡಲು ರೆಡಿಯಾಗಿ !

ಕಿರುತೆರೆಯಲ್ಲಿ ‘ಪೈಲ್ವಾನ್’ ಪಟ್ಟು ನೋಡಲು ರೆಡಿಯಾಗಿ !

ಬೆಂಗಳೂರು ಡಿಸೆಂಬರ್ 23, 2019 (www.justkannada.in): ಸ್ಯಾಂಡಲ್ ವುಡ್ ನಲ್ಲಿ ಭಾರಿ ಸದ್ದು ಮಾಡಿದ ಕಿಚ್ಚನ ಪೈಲ್ವಾನ್ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ.

ಸಿನಿಮಾದ ಪ್ರಸಾರ ಕನ್ನಡದ ಚಾನಲ ವೊಂದು  ಖರೀದಿಸಿತ್ತು. ಇದೀಗ ಕನ್ನಡ ಕಿರುತೆರೆಯಲ್ಲಿ ಇದೇ ಮೊದಲ ಬಾರಿಗೆ ಪೈಲ್ವಾನ್ ಸಿನಿಮಾ ಪ್ರಸಾರವಾಗಲಿದೆ.

ಇನ್ನು ಈಗಾಗಲೇ ಹಿಂದಿ ಕಿರುತೆರೆಯಲ್ಲಿ ಹಿಂದಿ ಅವತರಣಿಕೆ ಪ್ರಸಾರವಾಗಿದೆ. ಇದೀಗ ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಪ್ರಸಾರವಾಗಲಿದೆ. ಆದರೆ ಯಾವಾಗ ಎಂದು ವಾಹಿನಿ ಇನ್ನೂ ದಿನಾಂಕ ಪ್ರಕಟಿಸಿಲ್ಲ.