Friday, September 18, 2026

BDA Apartments

Home Front Page ನಾನು ಯಡಿಯೂರಪ್ಪನವರ ಮಾನಸ ಪುತ್ರ: ನನಗೂ ಸಚಿವ ಸ್ಥಾನ ಬೇಕು- ಬಿಜೆಪಿ ಶಾಸಕ ಎಂ ಪಿ...

ನಾನು ಯಡಿಯೂರಪ್ಪನವರ ಮಾನಸ ಪುತ್ರ: ನನಗೂ ಸಚಿವ ಸ್ಥಾನ ಬೇಕು- ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ ಆಗ್ರಹ

ಚಿಕ್ಕಮಗಳೂರು,ಡಿ,9,2019(www.justkannada.in): ಉಪ ಚುನಾವಣೆಯ ಕದನ ಅಂತ್ಯವಾಗುತ್ತಿದ್ದಂತೆ ಬಿಜೆಪಿಯಲ್ಲಿ ಸಚಿವ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ. ಚುನಾವಣಾ ಫಲಿತಾಂಶ ಹೊರಬಂದಿದ್ದು ಬಿಜೆಪಿ 12 ಸ್ಥಾನ ಗೆಲುವು ಸಾಧಿಸಿರುವ ಹಿನ್ನೆಲೆ ಬಿಎಸ್ ವೈ ಸರ್ಕಾರ ಸೇಫ್ ಆಗಿದ್ದು ಈ ನಡುವೆ ನನಗೂ ಸಚಿವ ಸ್ಥಾನ ಬೇಕು ಎಂದು ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಎಂ.ಪಿ ಕುಮಾರಸ್ವಾಮಿ, ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ನಾನು ಅವರ ಮನಸ್ಸಿನಲ್ಲಿ ಇದ್ದೇನೆ. ನನಗೆ ಈ ಭಾರಿ ಸಚಿವ ಸ್ಥಾನ ಕೊಡ್ತಾರೆ ಎಂಬ ನಂಬಿಕೆ ಇದೆ. ನಾನು ಯಡಿಯೂರಪ್ಪನವರ  ಮಾನಸ ಪುತ್ರ. ಕೆಲವರು, ನಾನು ಯಡಿಯೂರಪ್ಪನವರ ಮಾನಸ ಪುತ್ರ ಅಂತಾ ಹೇಳಿಕೊಳ್ತಾ ಇದ್ದಾರೆ. ಆದ್ರೆ ನಾನು ಯಡಿಯೂರಪ್ಪನವರ ನಿಜವಾದ ಮಾನಸ ಪುತ್ರ. ಹಾಗಾಗಿ‌ ಯಡಿಯೂರಪ್ಪನವರು ಈ ಭಾರಿಯಾದ್ರೂ ನನಗೆ ಸಚಿವ ಸ್ಥಾನ ಕೊಡ್ತಾರೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಎಲ್ಲರಿಗೂ ಸಚಿವ ಸ್ಥಾನ ನೀಡುವುದಾಗಿ ಸಿಎಂ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಇನ್ನು ಸಚಿವ ಸ್ಥಾನಕ್ಕಾಗಿ ಹಲವು ಬಿಜೆಪಿ ಶಾಸಕರು ಲಾಬಿ ನಡೆಸಲಿದ್ದು ಉಪಚುನಾವಣೆ ಗೆದ್ದ ಬಳಿಕ  ಇದೀಗ ಸಿಎಂ ಬಿಎಸ್ ವೈಸಂಪುಟ ವಿಸ್ತರಣೆ ಸರ್ಕಸ್ ಮಾಡಬೇಕಿದೆ.

Key words: son –cm bsy Yeddyurappa-ministerial post – BJP MLA -M P Kumaraswamy –demands