Monday, October 12, 2026

Dasara Wishes

Happy Dasara
Home Front Page ವಿಶ್ವನಾಥ್ ಗೆಲ್ಲಿಸಿದ್ರೆ, ಮುಂದಿನ ಹನುಮ ಜಯಂತಿಗೆ ಸಚಿವರಾಗಿ ಹುಣಸೂರಿಗೆ ಬರ್ತಾರೆ: ಪ್ರತಾಪ್ ಸಿಂಹ

ವಿಶ್ವನಾಥ್ ಗೆಲ್ಲಿಸಿದ್ರೆ, ಮುಂದಿನ ಹನುಮ ಜಯಂತಿಗೆ ಸಚಿವರಾಗಿ ಹುಣಸೂರಿಗೆ ಬರ್ತಾರೆ: ಪ್ರತಾಪ್ ಸಿಂಹ

ಮೈಸೂರು, ಡಿಸೆಂಬರ್ 01, 2019 (www.justkannada.in): ಹುಣಸೂರಲ್ಲಿ ಯಾವುದೇ ಜಾತಿ, ಧರ್ಮಗಳ ನಡುವೆ ಕಲಹ ಇರಲಿಲ್ಲ. ರಾಜಕೀಯಕ್ಕೊಸ್ಕರ ಯಾರು ಕಲಹಗಳನ್ನೆಲ್ಲಾ ಸೃಷ್ಟಿ ಮಾಡಿದ್ದಾರಲ್ಲ, ಅವ್ರಿಗೆ ಈಗ ಉತ್ತರ ಕೊಡ್ಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ವಿಶ್ವನಾಥ್ ಅವರನ್ನು ನಾವು ಗೆಲ್ಲಿಸಿ ಕಳ್ಸಿದ್ರೆ, 9ನೇ ತಾರೀಖು ಸಚಿವರಾಗಿ ಆಗಮಿಸ್ತಾರೆ. ಹನುಮ ಜಯಂತಿ ನಡೆಸುವ ಸ್ಥಳಕ್ಕೆ ಸಚಿವರಾಗಿ ವಿಶ್ವನಾಥ್ ಬರ್ತಾರೆ. ಹುಣಸೂರಿನ ಜನ ಬಹಳ ಜಾಣ್ಮೆಯಿಂದ ಯೋಚನೆ ಮಾಡ್ಬೇಕು ಎಂದು ಹೇಳಿದರು.

ದೇವರಾಜು ಅರಸು ನಂತ್ರ ಇಲ್ಲಿ ಯಾರು ಸಚಿವ್ರಾಗಿಲ್ಲ. ಅರಸುರವರ ಆದರ್ಶ ಇಟ್ಕೊಂಡಿರೋ ವಿಶ್ವನಾಥ್ ಸಚಿವರಾಗ್ತಾರೆ. ಯೋಚನೆ ಮಾಡಿ ಸಚಿವ್ರು ಬೇಕೋ ಬೇಡ್ವ ಅಂತಾ..? ಹುಣಸೂರು ಅಭಿವೃದ್ಧಿಯಾಗುವುದಕ್ಕೊಸ್ಕರ ನಾವು ವಿಶ್ವನಾಥ್ರನ್ನ ಗೆಲ್ಲಿಸಬೇಕಿದೆ. ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ, ಹುಣಸೂರಿನಲ್ಲಿ ವಿಶ್ವನಾಥ್ ಇರ್ತಾರೆ. ಬಿಜೆಪಿಗೆ ಮತ ನೀಡಿ ಎಂದು ಪ್ರತಾಪ್ ಸಿಂಹ ಮನವಿ ಮಾಡಿದರು.