ಪ್ರಧಾನಿ ಮೋದಿ ದಿನದ ಹದಿನೆಂಟು ಗಂಟೆ ಕೆಲಸ ಮಾಡಿದ್ದರ ಫಲ ದೇಶದ ಜಿಡಿಪಿ ಶೇ.4.5ಕ್ಕೆ ಕುಸಿದಿದೆ- ಟ್ವಿಟ್ಟರ್ ನಲ್ಲಿ ಟಾಂಗ್ ಕೊಟ್ಟ ಮಾಜಿ ಸಿಎಂ ಸಿದ್ಧರಾಮಯ್ಯ…

ಬೆಂಗಳೂರು,ನ,30,2019(www.justkannada.in): ದೇಶದ ಜಿಡಿಪಿ ಕುಸಿತ, ನಿರುದ್ಯೋಗ, ಹಸಿವಿನ ಸೂಚ್ಯಾಂಕ ವಿಚಾರ ಕುರಿತು ಪ್ರಧಾನಿ ಮೋದಿ ಅವರಿಗೆ ಟ್ವಿಟ್ಟರ್ ನಲ್ಲಿ ಟ್ವಿಟ್ ಮಾಡಿ ಮಾಜಿ ಸಿಎಂ ಸಿದ್ಧರಾಮಯ್ಯ ಟಾಂಗ್ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ದಿನದ ಹದಿನೆಂಟು ಗಂಟೆ ಕೆಲಸ ಮಾಡಿದ್ದರ ಫಲ ದೇಶದ ಜಿಡಿಪಿ ಶೇ.4.5ಕ್ಕೆ ಕುಸಿದಿದೆ. ಪ್ರಧಾನಿಗಳೇನಾದ್ರೂ ಇನ್ನೂ ಒಂದು ಗಂಟೆ ಜಾಸ್ತಿ ಕೆಲಸ ಮಾಡಿದ್ದರೆ ದೇಶದ ಸ್ಥಿತಿ ಏನಾಗುತ್ತಿತ್ತೋ.? ಎಂದು ಮಾಜಿಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ವಿರುದ್ದ ಕುಟುಕಿದ್ದಾರೆ.

ಈ ಬಗ್ಗೆ ಟ್ವಿಟ್ ಮಾಡಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ಪ್ರಧಾನಿ‌ ನರೇಂದ್ರ ಮೋದಿಯವರು ದಿನದ ಹದಿನೆಂಟು ಗಂಟೆ ಕೆಲಸ ಮಾಡಿದ್ದರ ಫಲ ದೇಶದ ಜಿಡಿಪಿ 4.5ಕ್ಕೆ ಇಳಿದಿದೆ, ನಿರುದ್ಯೋಗ 45 ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ, ಹಸಿವಿನ ಸೂಚ್ಯಂಕದಲ್ಲಿ ಬಾಂಗ್ಲಾ, ಪಾಕ್‌ಗಿಂತ ಭಾರತ ಹಿಂದಿದೆ. ಪ್ರಧಾನಿಗಳೇನಾದ್ರೂ ಇನ್ನೂ ಒಂದು ಗಂಟೆ ಜಾಸ್ತಿ ಕೆಲಸ ಮಾಡಿದ್ದರೆ ದೇಶದ ಸ್ಥಿತಿ ಏನಾಗುತ್ತಿತ್ತೋ.? ಎಂದು  ಟೀಕಿಸಿದ್ದಾರೆ.

Key words: former cm –siddaramaah-tweet-prime minister- narendra modi- GDP