Wednesday, August 5, 2026

BDA Apartments

Home Front Page ಕೆ.ಆರ್ ಪೇಟೆ ಉಪಚುನಾವಣೆ: ಜೆಡಿಎಸ್ ಸಮಾವೇಶದಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಣ್ಣೀರು….

ಕೆ.ಆರ್ ಪೇಟೆ ಉಪಚುನಾವಣೆ: ಜೆಡಿಎಸ್ ಸಮಾವೇಶದಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಣ್ಣೀರು….

ಮಂಡ್ಯ,ನ,27,2019(www.justkannada.in):  ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣ ರಂಗೇರಿದ್ದು, ಜೆಡಿಎಸ್ ಸಮಾವೇಶದಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಣ್ಣೀರು ಹಾಕಿದ ಘಟನೆ ನಡೆದಿದೆ.

ಇಂದು ಕೆ.ಆರ್ ಪೇಟೆಯ ಕಿಕ್ಕೇರಿಯಲ್ಲಿ ಜೆಡಿಎಸ್ ಸಮಾವೇಶ ಆಯೋಜಿಸಲಾಗಿತ್ತು. ಸಮಾವೇಶದಲ್ಲಿ ಮಾತನಾಡಿದ  ಹೆಚ್.ಡಿ ಕುಮಾರಸ್ವಾಮಿ, ಲೋಕಸಭಾ ಚುನಾವಣೆಯಲ್ಲಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಸೋಲು ನೆನೆದು ಕಣ್ಣೀರು ಹಾಕಿದರು.

ನಾನೇನು ತಪ್ಪು ಮಾಡಿದ್ದೆ. ಜಿಲ್ಲೆಯ ಜನರನ್ನ ನಾನು ನಂಬಿದ್ದೆ.  ನೀವೆ ನನ್ನನ್ನ ಕಙೈ ಬಿಟ್ಟಿರಿ ಎಂದು ಹೆಚ್.ಡಿ ಕುಮಾರಸ್ವಾಮಿ ಕಣ್ಣೀರು ಹಾಕಿದರು.  ತಾವು ಸಿಎಂ ಆಗಿದ್ದಾಗ ನಾರಾಯಣಗೌಡ ಬರೆದಿದ್ದ ಪತ್ರ ಓದಿ ಭಾವುಕರಾಗಿ ಬೇಸರ ವ್ಯಕ್ತಪಡಿಸಿದ ಹೆಚ್.ಡಿ ಕುಮಾರಸ್ವಾಮಿ, ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆಂದು ಹರಿಹಾಯ್ದರು.

Key words: KR Pete -by-election-Former CM- HD Kumaraswamy -tears