Saturday, September 5, 2026

BDA Apartments

Home Front Page ನೀವು ಸಿಎಂ ಆಗೋದಾದ್ರೆ ಮಾತ್ರ ನಾವು ಮತ ಹಾಕ್ತೀವಿ- ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಗೆ...

ನೀವು ಸಿಎಂ ಆಗೋದಾದ್ರೆ ಮಾತ್ರ ನಾವು ಮತ ಹಾಕ್ತೀವಿ- ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಗೆ ಮುತ್ತಿಗೆ ಅಸಮಾಧಾನ….

ಮೈಸೂರು,ನ,25,2019(www.justkannada.in): ಹುಣಸೂರು ಉಪ ಚುನಾವಣೆ ಹಿನ್ನೆಲೆ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಗೆ ದಲಿತ ಯುವಕರು ಮುತ್ತಿಗೆ ಹಾಕಿ, ನೀವು ಸಿಎಂ ಆಗೋದಾದ್ರೆ ಮಾತ್ರ ನಾವು ಮತ ಹಾಕ್ತೀವೆ ಎಂದು ಹೇಳಿದ್ದಾರೆ.

ಹುಣಸೂರು ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ ಮಂಜುನಾಥ್ ಪರ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಇಂದು ಬನ್ನಿಕುಪ್ಪೆಯಲ್ಲಿ ಪ್ರಚಾರದಲ್ಲಿ ತೊಡಗಿದ್ದರು. ಈ ವೇಳೆ ಮುತ್ತಿಗೆ ಹಾಕಿದ ದಲಿತ ಯುವಕರು, ಸಿದ್ದರಾಮಯ್ಯ ಅವರು ಸಿಎಂ ಆಗೋದಕ್ಕೆ ನಾವು ಯಾಕೆ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್‌ಗೆ ವೋಟು ಹಾಕಬೇಕು ಎಂದು ಪ್ರಶ್ನಿಸಿದ್ದಾರೆ.

 ಹತ್ತು ವರ್ಷ ನೀವು ಕೆಪಿಸಿಸಿ ಅಧ್ಯಕ್ಷರಾಗಿದ್ದೀರಿ.  ಆದ್ರೂ ಏಕೆ ನಿಮ್ಮನ್ನ ಸಿಎಂ ಮಾಡಿಲ್ಲ. ನೀವು ಗಟ್ಟಿಯಾಗಿ ಮಾತನಾಡಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ನನ್ನನ್ನ ಸಿಎಂ ಮಾಡೋದು ಸಿದ್ಧರಾಮಯ್ಯ ಅಲ್ಲ. ಹೈಕಮಾಂಡ್.  ಜನರು ನಿರ್ಧರಿಸಿ ಅಧಿಕಾರಕ್ಕೆ ತಂದರೇ ಸಿಎಂ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಎಲ್ಲವನ್ನೂ ಕಾಲಘಟ್ಟವೇ ನಿರ್ಧರಿಸುತ್ತದೆ ಎಂದು ತಿಳಿಸಿದರು.

Key words: hunsur-by-election-CM -vote – Former DCM- Dr.G.Parameshwar