Friday, October 16, 2026

Dasara Wishes

ಮಾವಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹ: ಇಂದು ಕೋಲಾರ ಬಂದ್ DasraWishes_JK DasraWishes JK
Happy Dasara
Home Cinema ನಟ ಕಮಲ್ ಹಾಸನ್’ಗೆ ಇಂದು ಶಸ್ತ್ರ ಚಿಕಿತ್ಸೆ

ನಟ ಕಮಲ್ ಹಾಸನ್’ಗೆ ಇಂದು ಶಸ್ತ್ರ ಚಿಕಿತ್ಸೆ

ಚೆನ್ನೈ, ನವೆಂಬರ್ 22, 2019 (www.justkannada.in): ಖ್ಯಾತ ನಟ, ರಾಜಕಾರಣಿ ಕಮಲ್ ಹಾಸನ್ ಅವರು ಕಾಲಿನ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಲಿದ್ದು, ಬಲಗಾಲಿನ ಕಸಿ ತೆಗೆಯುವ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.

ಜುಲೈ 2016ರಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಅವರ ಬಲಗಾಲಿನ ಮೂಳೆ ಮುರಿದಿದ್ದ ಸಂದರ್ಭದಲ್ಲಿ ಕಸಿ ಹಾಕಲಾಗಿತ್ತು. ಇದರಿಂದ ಗಾಯವಾಗಿತ್ತು. ಇಂದು ಶುಕ್ರವಾರ ಶಸ್ತ್ರಚಿಕಿತ್ಸೆ ನಡೆಸಿ ಈ ಕಸಿ ತೆಗೆಯಲಾಗುತ್ತದೆ.

ರಾಜಕೀಯ ಮತ್ತು ಚಿತ್ರದಾ ಶೂಟಿಂಗ್ ನಲ್ಲಿ ತೊಡಗಿದ್ದ ಕಾರಣ ಕಸಿ ತೆಗೆಯುವ ಚಿಕಿತ್ಸೆಯನ್ನು ಮುಂದೂಡಲಾಗಿತ್ತು. ಆದರೆ ಇದೀಗ ಅವರ ವೈದ್ಯರ ಸಲಹೆಯ ಮೇರೆಗೆ ಕಮಲ್ ಹಾಸನ್ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಲಿದ್ದಾರೆ.