Saturday, October 17, 2026

Dasara Wishes

Happy Dasara
Home Front Page ಅಧಿಕೃತವಾಗಿ ಕಮಲ ಹಿಡಿದ ಅನರ್ಹ ಶಾಸಕರು

ಅಧಿಕೃತವಾಗಿ ಕಮಲ ಹಿಡಿದ ಅನರ್ಹ ಶಾಸಕರು

ಬೆಂಗಳೂರು, ನವೆಂಬರ್ 14, 2019 (www.justkannada.in): ಅನರ್ಹ ಶಾಸಕರ ಕುರಿತ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಅನರ್ಹ ಶಾಸಕರು ಇಂದು ಅಧಿಕೃತವಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನರ್ಹ ಶಾಸಕರು ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಭೈರತಿ ಬಸವರಾಜು, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ರಮೇಶ್ ಜಾರಕಿಹೊಳಿ, ಮುನಿರತ್ನ, ಆನಂದ್ ಸಿಂಗ್, ಹೆಚ್.ವಿಶ್ವನಾಥ್, ಮಹೇಶ್ ಕಮಟಳ್ಳಿ, ಪ್ರತಾಪ್ ಗೌಡ ಪಾಟೀಲ್, ಹೆಚ್.ಸುಧಾಕರ್, ಶಿವರಾಜ್ ಹೆಬ್ಬಾರ್, ಶ್ರೀಮಂತ್ ಪಾಟೀಲ್, ಎಂಟಿಬಿ ನಾಗರಾಜ್, ಕೆ.ಗೋಪಾಲಯ್ಯ, ಕೆ.ಸಿ. ನಾರಾಯಣಗೌಡ ಮತ್ತು ಆರ್. ಶಂಕರ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.