ಬೆಂಗಳೂರು,ನವೆಂಬರ್,11,2026 (www.justkannada.in): ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ನನ್ನ ನಡುವಿನ ಸ್ನೇಹದಲ್ಲಿ ಯಾವುದೇ ಬಿರುಕು ಬಿಟ್ಟಿಲ್ಲ ಎಂದು ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಸ್ಪಷ್ಟನೆ ನೀಡಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್ ಸಿ ಮಹದೇವಪ್ಪ, ಸ್ನೇಹ ಯಾವತ್ತೂ ಸ್ನೇಹವಾಗಿಯೇ ಇರುತ್ತದೆ. ಸಿದ್ದರಾಮಯ್ಯ ಬಗ್ಗೆ ನನಗೆ ಪ್ರೀತಿ, ಗೌರವವಿದೆ. ಸಿದ್ದರಾಮಯ್ಯ ಜತೆ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯವಿಲ್ಲ. ನಾನು ಅಧಿಕಾರಕ್ಕಾಗಿ ರಾಜಕೀಯಕ್ಕೆ ಬಂದವನಲ್ಲ ಅಧಿಕಾರ ಬೇಕಿದ್ದರೇ ಹಿಂದಿನ ಪಕ್ಷದಲ್ಲೇ ಉಳಿದುಕೊಳ್ಳಬಹುದಿತ್ತು. ಅಧಿಕಾರದ ಆಸೆಯನ್ನ ಬಿಟ್ಟು ಸಿದ್ದಾಂತಕ್ಕಾಗಿ ಈ ಪಕ್ಷಕ್ಕೆ ಬಂದಿದ್ದೇನೆ ಎಂದರು.
ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಯಾವುದೇ ಅಸಮಾಧಾನವಿಲ್ಲ. ಸಚಿವ ಸ್ಥಾನ ಸಿಗದಿದ್ದರೂ ನೋವಿಲ್ಲ. ಅಧಿಕಾರಕ್ಕಿಂತ ಸಿದ್ದಾಂತ ತ್ವತ್ವಗಳಿಗೆ ಹೆಚ್ಚು ಆದ್ಯತೆ ಕೊಡಿತ್ತೇನೆ ಎಂದು ಹೆಚ್ ಸಿ ಮಹದೇವಪ್ಪ ತಿಳಿಸಿದರು.
no rift, my friendship, with, Siddaramaiah, H.C. Mahadevappa, clarifies







