Wednesday, November 11, 2026

Dasara Wishes

Happy Dasara
Home Front Page ರೈತರು ಆತಂಕ ಪಡಬೇಕಿಲ್ಲ, ಬರಪರಿಹಾರ ತಲುಪಲಿದೆ: ಸಿಎಂ‌ ಡಿ.ಕೆ‌ ಶಿವಕುಮಾರ್ ಭರವಸೆ

ರೈತರು ಆತಂಕ ಪಡಬೇಕಿಲ್ಲ, ಬರಪರಿಹಾರ ತಲುಪಲಿದೆ: ಸಿಎಂ‌ ಡಿ.ಕೆ‌ ಶಿವಕುಮಾರ್ ಭರವಸೆ

ದಸರಾ ಲೈಟಿಂಗ್ಸ್ 10 ದಿನ ವಿಸ್ತರಣೆ ಮಾಡಲು ತೀರ್ಮಾನ- ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು/ಮೈಸೂರು, ನವೆಂಬರ್,11,2026 (www.justkannada.in): ‘ರಾಜ್ಯದ ರೈತ ಬಾಂಧವರಿಗೆ ಬರ ಪರಿಹಾರದ ಕುರಿತು ಯಾವುದೇ ರೀತಿಯ ಗೊಂದಲ ಬೇಡ. ಪ್ರತಿಯೊಬ್ಬ ಅರ್ಹ ರೈತನಿಗೂ ನಮ್ಮ ಸರ್ಕಾರ ಎರಡು‌ ಕಂತಿನಲ್ಲಿ 5,000 ರೂ. ಬಿಡುಗಡೆ ಮಾಡುತ್ತದೆ. ಮೊದಲನೆ ಕಂತಿನ ಹಣ ಈಗಾಗಲೇ ಅನೇಕ ರೈತರನ್ನು ತಲುಪಿದೆ.‌ ಪ್ರತಿ ರೈತರಿಗೆ ಹಣ ತಲುಪಿಸಲು ಸೂತ್ರ ರಚಿಸಿದೆ‌’ ಎಂದು ಸಿಎಂ‌ ಡಿ ಕೆ‌ ಶಿವಕುಮಾರ್ ಅವರು ಹೇಳಿದರು.

ಸದಾಶಿವನಗರದ ನಿವಾಸದ ಬಳಿ ಹಾಗೂ ಮೈಸೂರು ವಿಮಾನ ನಿಲ್ದಾಣದ ಬಳಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದರು.

‘ಪ್ರತಿ ರೈತರಿಗೂ ಒಂದು ನಿರ್ದಿಷ್ಟ ಮೊತ್ತವನ್ನು ನಿಗದಿಪಡಿಸಲಾಗಿದೆ. ಸರಿಯಾದ ಖಾತೆಗಳಿಗೆ ಹಣ ತಲುಪಿದೆ. ಆದರೆ ಹಣ ತಲುಪದ ರೈತರ ಖಾತೆಯಲ್ಲಿ ಇರುವ ಅಡತಡೆ ನಿವಾರಿಸಿ ಪಾವತಿಸಲಾಗುವುದು. ಹೀಗಾಗಿ ರೈತರು ಆತಂಕ ಪಡುವ ಅಗತ್ಯವಿಲ್ಲ‌’ ಎಂದು ಸ್ಪಷ್ಟನೆ ನೀಡಿದರು.

ಕೇಂದ್ರ ಸರ್ಕಾರ ಕೊಡದೆ ಇದ್ದರೂ ನುಡಿದಂತೆ ನಾವು ಕೊಡುತ್ತೇವೆ

‘ಒಂದು ಪಕ್ಷ ರೈತರಿಗೆ ತಲುಪಬೇಕಾದ ಮೊತ್ತದಲ್ಲಿ ಹೆಚ್ಚು-ಕಮ್ಮಿಯಾಗಿದ್ದರೆ ಅದನ್ನು ಸರಿಪಡಿಸಲಾಗುವುದು.  ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡದೇ ಇದ್ದರೂ ನಮ್ಮ ಸರ್ಕಾರ ರೈತರಿಗೆ ನುಡಿದಂತೆ ಎರಡು ಕಂತುಗಳಲ್ಲಿ 5 ಸಾವಿರ ರೂ. ಪರಿಹಾರ ಪಾವತಿ ಮಾಡುತ್ತದೆ’ ಎಂದು ಭರವಸೆ ನೀಡಿದರು.

ತಾಂತ್ರಿಕ ಸಮಸ್ಯೆ ಇದ್ದರೆ ಸರಿಪಡಿಸುತ್ತೇವೆ

‘ಒಂದೇ ಬಟನ್ ಮೂಲಕ ಎಲ್ಲಾ ರೈತರ ಖಾತೆಗೂ ಹಣ ವರ್ಗಾವಣೆಯಾಗುತ್ತಿದೆ. ಆದರೆ ಕೆಲವು ಬ್ಯಾಂಕ್ ಖಾತೆಗಳು ಸರಿಯಯಾಗಿಲ್ಲ ಹಾಗೂ ಸಾಲದ ಬಾಬತ್ತಿಗೆ ಲಿಂಕ್ ಆಗಿದೆ. ಎಲ್ಲದರ ದಾಖಲೆಗಳನ್ನು ಪರಿಶೀಲಿಸಿ ಪರಿಹಾರ ಮೊತ್ತ ಶೀಘ್ರ ಪಾವತಿಸಲಾಗುವುದು’ ಎಂದರು.

ನಿಗಮ ಮಂಡಳಿಗೆ ಶೀಘ್ರ ನೇಮಕ, ಇಂದು ನಿರ್ದೇಶಕ ಪಟ್ಟಿ ಬಿಡುಗಡೆ

‘ನಿಗಮ ಮಂಡಳಿಯ ನೇಮಕ 3 ಹಂತದಲ್ಲಿ ನಡೆಯಲಿದ್ದು, ಮೊದಲನೇ ಹಂತದಲ್ಲಿ 500 ಮಂದಿಯ ನಿರ್ದೇಶಕರ ಪಟ್ಟಿ ಸಿದ್ದವಿದ್ದು, ಅದಕ್ಕೆ ಸಹಿ ಹಾಕಿ ಬಂದಿದ್ದೇನೆ. ಆ ಪಟ್ಟಿ ಇಂದು ಬಿಡುಗಡೆ ಆಗಲಿದೆ. ಪಕ್ಷದ ಹಿರಿಯ ಶಾಸಕರಿಗೂ ನಿಗಮ ಮಂಡಳಿಯಲ್ಲಿ ಸೂಕ್ತ ಅವಕಾಶ ಕೊಡಬೇಕು. ಅದು ನಮ್ಮ ಕರ್ತವ್ಯ. ಆ ಕೆಲಸವನ್ನು ಮಾಡುತ್ತೇವೆ’ ಎಂದು ಭರವಸೆ ನೀಡಿದರು.

ಎಥೆನಾಲ್ ಕಲಬೆರಕೆ ಬಗ್ಗೆ ಉತ್ತರಿಸಿ, ಬಿಜೆಪಿ ನಾಯಕರು ಪ್ರತಿಭಟನೆ ಮಾಡಲಿ

ಬೆಲೆ ಏರಿಕೆ ವಿರುದ್ಧ ಬಿಜೆಪಿ ನಾಯಕರು ಬೆಂಗಳೂರಲ್ಲಿ ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಕೇಳಿದಾಗ, ‘ಮಾಡಲಿ, ಅವರು ಮಾಡುತ್ತಿರುವುದು ಪ್ರತಿಭಟನೆಯಲ್ಲ ರಾಜಕಾರಣ. ಕೇಂದ್ರ ಸರ್ಕಾರ ತೈಲಬೆಲೆ ಏರಿಸಿದಾಗ ಏಕೆ ಪ್ರತಿಭಟನೆ ಮಾಡಲಿಲ್ಲ? ಎಥೆನಾಲ್ ಅನ್ನು ಶೇ.20ರಷ್ಟು ಬೆರೆಸುವ ಬದಲು ಶೇ.30ರಷ್ಟು ಬೆರೆಸಿದ್ದಾರೆ. ಇದರಿಂದ ರಾಜ್ಯದ ಕೋಟ್ಯಂತರ ವಾಹನಗಳಿಗೆ ತೊಂದರೆಯಾಗಿದೆ. ಎಂಜಿನ್ ಗಳು ಕೆಟ್ಟು ಹೋಗಿ ನಷ್ಟವಾಗಿದೆ. ಇವೆಲ್ಲಾ ಬಿಜೆಪಿ ಅವರಿಗೆ ಕಾಣುವುದಿಲ್ಲವೇ? ಈ ಅವಾಂತರ ಅವರಿಗೆ ತಿಳಿದಿಲ್ಲವೇ?’ ಎಂದು ಪ್ರಶ್ನಿಸಿದರು.ನಗರಗಳ ಬೆಳವಣಿಗೆಯೇ ಗ್ರಾಮೀಣಾಭಿವೃದ್ಧಿಗೆ ಶಕ್ತಿ: ಸಿಎಂ ಡಿ ಕೆ ಶಿವಕುಮಾರ್

‘ಎಥೆನಾಲ್ ಅವೈಜ್ಞಾನಿಕ ಬೆರೆಕೆಗೆ ಸಂಬಂಧಿಸಿದಂತೆ ನಮ್ಮ ಆಹಾರ ಮಂತ್ರಿಗಳು ರಾಜ್ಯದ 67ಕಡೆ ಪರೀಕ್ಷೆ ನಡೆಸಿ ಸತ್ಯಾಸತ್ಯತೆ ಅರಿತಿದ್ದಾರೆ. ಈ ಕೃತ್ಯದ ಬಗ್ಗೆ ಸಾಕ್ಷೀ ಸಮೇತ ಕೇಂದ್ರ ಸರ್ಕಾರದ ಗಮನಕ್ಕೂ ತಂದಿದ್ದಾರೆ. ಕಲಬೆರೆಕೆ ತೈಲ ಸರಬರಾಜು ಮಾಡಿ ರಾಜ್ಯದ ಜನರಿಗೆ ಹೊಡೆತ ನೀಡಿರುವುದಕ್ಕೆ ಯಾರು ಜವಾಬ್ದಾರಿ?  ಕೇಂದ್ರದ ಸಚಿವರು ಇಲ್ಲ, ಇಲ್ಲ ಎನ್ನುತ್ತಿದ್ದಾರೆ. ಆದರೆ, ನಮ್ಮ ಸ್ಯಾಂಪಲ್ ಗಳು ಸಾಕ್ಷಿಗೆ ಇವೆ. ಮೊದಲು ಇದಕ್ಕೆ ಬಿಜೆಪಿಯವರು ಉತ್ತರ ಕೊಡಲಿ’ ಎಂದು ಸವಾಲು ಹಾಕಿದರು.Farmers jk02_new jk02 new

ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿರುವ ಬಗ್ಗೆ ಕೇಳಿದಾಗ, ‘ಅವರ ಖುಷಿಗೆ ಮಾತನಾಡುತ್ತಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಅವರು ತುಂಡು ತುಂಡಾಗಿ ಕತ್ತರಿಸಿ ಸಮುದ್ರಕ್ಕೆ ಹಾಕುತ್ತೇನೆ ಅಂದರು, ಇನ್ನೊಬ್ಬರು ಪಕ್ಷ ಅಧ್ಯಕ್ಷರು ‘ನನ್ಮಕ್ಕಳು’ ಅಂತ ಜರಿದರು. ಹಾಗಾದರೆ, ನಾವೆಲ್ಲಾ ವಿಜಯೇಂದ್ರರ ಮಕ್ಕಳಾ? ಬಿಜೆಪಿ ಅವರು ಆತ್ಮಸಂತೋಷಕ್ಕೆ ಬೇರೆಯವರನ್ನು ಬೈಯುತ್ತಿದ್ದಾರೆ’ ಎಂದರು.

 

English Summary
Title

Karnataka CM D.K. Shivakumar Assures ₹5,000 Drought Relief for All Eligible Farmers in Two Instalments

Short Description
Karnataka Chief Minister D.K. Shivakumar has assured drought-affected farmers not to panic, confirming that ₹5,000 in financial aid will reach every eligible beneficiary. Speaking on November 11, 2026, the CM stated that the state government will disburse the full relief amount in two instalments of ₹2,500 each, independent of Central Government funding. Addressing concerns over partial or delayed payments, Shivakumar clarified that discrepancies caused by bank account errors or loan adjustments will be verified and rectified. Deputy CM G. Parameshwara added that ₹1,250 crore has been earmarked for the first phase to support nearly 50 lakh farmer families across Karnataka.
Keywords
Farmers, not worry, drought relief, will reach, them, CM, D.K. Shivakumar, assurance