ಬೆಂಗಳೂರು,ನವೆಂಬರ್,10,2026 (www.justkannada.in): ಬರ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ದ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಸರ್ಕಾರ ರೈತರನ್ನ ಅಪಹಾಸ್ಯ ಮಾಡುವ ಕೆಲಸ ಸರ್ಕಾರ ಮಾಡುತ್ತಿದೆ. ಗ್ಯಾರಂಟಿ ಯೋಜನೆ ನೆಪದಲ್ಲಿ ರೈತರನ್ನ ಭಿಕ್ಷುಕರ ರೀತಿ ನೋಡಿತ್ತಿದೆ. ಯಾರೂ ಕೂಡ ಇವರ 2 ಸಾವಿರ ರೂ,ಗೆ ಕಾಯ್ದುಕೊಂಡಿಲ್ಲ. ಕಾಂಗ್ರೆಸ್ ನವರು ಗ್ಯಾರಂಟಿ ಚೋರ್ ಎಸ್ ಐಆರ್ ಆರಂಭಿಸಿದ್ದಾರೆ. ಮೊದಲೇ ಯಾಕೆ ನಿಮಗೆ ಪ್ರಜ್ಞೆ ಇರಲಿಲ್ವಾ ಎಂದು ವಾಗ್ದಾಳಿ ನಡೆಸಿದರು.
ಏನು ದುಂಡಾವರ್ತಿ ಸರ್ಕಾರ ಇದು. ದಗಾಕೋರ ಸರ್ಕಾರ ಇದು. ನೀವು ಬೇಕಾದು ಮಾಡಿಕೊಳ್ಳಿ ಎಂಬ ಧೋರಣೆಯಲ್ಲಿರುವ ಸರ್ಕಾರ ನಾವು ಇರೋದೇ ಒಂದು ವರ್ಷ ಎಂಬ ನಿಲುವಿಗೆ ಬಂದಿದೆ. ದಂಪತಿ ಬಸ್ ನಲ್ಲಿ ಹೋದರೆ ಪತಿಗೆ ಡಬಲ್ ಚಾರ್ಜ್ ಪತ್ನಿಗೆ ಫ್ರೀ. ನೀವು ಕೊಡುತ್ತಿರುವ ಗ್ಯಾರಂಟಿಯೇ 420 ಎಂದು ಟೀಕಿಸಿದರು.










