Thursday, November 5, 2026

Dasara Wishes

Happy Dasara
Home Front Page ಗ್ರಾಮೀಣ ರಸ್ತೆಗೆ 10000 ಕೋಟಿ ಅನುದಾನ:  ಸಚಿವ ಈಶ್ವರ ಖಂಡ್ರೆ

ಗ್ರಾಮೀಣ ರಸ್ತೆಗೆ 10000 ಕೋಟಿ ಅನುದಾನ:  ಸಚಿವ ಈಶ್ವರ ಖಂಡ್ರೆ

ಗ್ರಾಮೀಣ ರಸ್ತೆಗೆ 10000 ಕೋಟಿ ಅನುದಾನ: ಸಚಿವ ಈಶ್ವರ ಖಂಡ್ರೆ

ಮೈಸೂರು, ನವೆಂಬರ್,4,2026 (www.justkannada.in): ರಾಜ್ಯದ  ಗ್ರಾಮೀಣ ರಸ್ತೆ ಅಭಿವೃದ್ಧಿಗೆ 10,000 ಕೋಟಿ ರೂ. ಅನುದಾನವನ್ನು ಮುಖ್ಯಮಂತ್ರಿಗಳು ನೀಡುವುದಾಗಿ ಪ್ರಕಟಿಸಿದ್ದು, ಇದು ಈವರೆಗಿನ ಅತಿ ದೊಡ್ಡ ಅನುದಾನವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.

ಮೈಸೂರಿನಲ್ಲಿಂದು ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿದ ಅವರು ಅಭಿವೃದ್ಧಿಗೆ ಹಣದ ಕೊರತೆ ಇಲ್ಲ, ಗ್ರಾಮೀಣ ರಸ್ತೆ ಸಂಪರ್ಕ ಯೋಜನೆಯಡಿ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲು 10 ಸಾವಿರ ಕೋಟಿ ರೂ. ನೀಡುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ ಎಂದರು.

ಅದೇ ರೀತಿ ಪ್ರತಿ ಗ್ರಾಮ ಪಂಚಾಯತಿಗೂ ಅಭಿವೃದ್ಧಿ ಮತ್ತು ಮೂಲಭೂತ ಸೌಕರ್ಯ ಕಲ್ಪಿಸಲು 50 ಲಕ್ಷ ರೂ.ಗಳಿಂದ 1 ಕೋಟಿ ರೂ. ನೀಡುವುದಾಗಿಯೂ ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದೆ 117 ಕೋಟಿ ರೂ.ಗಳನ್ನು ಗ್ರಾಮೀಣ ಕುಡಿಯುವ ನೀರಿಗಾಗಿ ಬಿಡುಗಡೆ ಮಾಡಲಾಗಿತ್ತು. ಈಗ ಡಿ.ಕೆ. ಶಿವಕುಮಾರ್ ಅವರು, ಎಲ್ಲ ಗ್ರಾಮೀಣ ಭಾಗದ ವಿಧಾನಸಭಾ ಕ್ಷೇತ್ರಗಳಿಗೆ ತಲಾ 1 ಕೋಟಿ ಬಿಡುಗಡೆಮಾಡಿದ್ದು 306 ಕೋಟಿ ರೂ. ಕುಡಿಯುವ ನೀರಿಗಾಗಿಯೇ ಲಭ್ಯವಿದೆ ಎಂದರು.

ಜನವರಿಯಲ್ಲಿ ತಾ.ಪಂ, ಜಿ.ಪಂ. ಚುನಾವಣೆ:

ಸರ್ಕಾರ ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ ನಡೆಯಲು ಈಗಾಗಲೇ ಕರಡು ಅಧಿಸೂಚನೆ ಹೊರಡಿಸಿದೆ. ರಾಜ್ಯ ಚುನಾವಣೆ ಆಯೋಗಕ್ಕೆ ಶೀಘ್ರವೇ ಪ್ರಸ್ತಾವನೆ ಸಲ್ಲಿಸಲಾಗುವುದು. ಬರುವ ಜನವರಿ 2ನೇ ವಾರದೊಳಗೆ ಚುನಾವಣೆ ನಡೆಯಲಿದೆ ಎಂದರು.ಹಾಲು, ಮೊಸರಿನ ದರ ಏರಿಕೆಗೆ ಬಿಜೆಪಿ ಟೀಕೆ: ಸಚಿವ ಈಶ್ವರ್ ಖಂಡ್ರೆ ತಿರುಗೇಟು

ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಹೊಸ ಮತದಾರರ ಪಟ್ಟಿ ಬಳಕೆ ಮಾಡುತ್ತೀರೋ, ಹಳೆಯ ಮತದಾರರ ಪಟ್ಟಿಯ ಆಧಾರದಲ್ಲಿ ನಡೆಸುತ್ತೀರೋ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಾಳೆ ನಡೆಯಲಿರುವ ಸಚಿವ ಸಂಪುಟದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಹಾಲಿನ ದರ ಏರಿಕೆ ಸಮರ್ಥನೆ:

ಪೆಟ್ರೋಲ್, ಡೀಸೆಲ್ ದರ ಹೆಚ್ಚಳದಿಂದ ಎಲ್ಲ ಜೀವನಾವಶ್ಯಕ ವಸ್ತುಗಳ ದರವೂ ಹೆಚ್ಚಳವಾಗಿದ್ದು, ಹೈನುಗಾರಿಕೆ ಮಾಡುವ ರೈತರೂ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ರೈತರಿಗೆ ನೆರವಾಗಲು ರಾಜ್ಯ ಸರ್ಕಾರ ಹಾಲಿನ ದರ ಏರಿಕೆ ಮಾಡಿದೆ ಎಂದು ಸಮರ್ಥಿಸಿಕೊಂಡರು.

Rs 10 jk02_new jk02 new

English Summary
Title

Karnataka Rural Road Project: Minister Eshwar Khandre Boosts Infrastructure with Rs 10000 Crore Grant

Short Description
The Karnataka government has approved a massive ₹10,000 crore grant to overhaul its rural infrastructure. Under the leadership of RDPR Minister Eshwar Khandre, the state will upgrade 15,000 km of village roads through the Mukhya Mantri Rural Roads Development Project. This initiative aims to dramatically improve rural connectivity, linking remote villages to main taluk centers. Supported by a 70% grant model from the Asian Development Bank, the first phase of this development project fast-tracks high-quality road networks to boost local economies and simplify daily travel across Karnataka.
Keywords
Rs 10, 000 crore, grant, rural roads, Minister, Eshwar Khandre