Thursday, November 5, 2026

Dasara Wishes

Happy Dasara
Home Front Page ಜಲ ಬಜೆಟ್ ಬಗ್ಗೆ ಮಾಹಿತಿ ನೀಡದ ಅಧಿಕಾರಿಗಳಿಗೆ  ಸಚಿವ ಈಶ್ವರ್ ಖಂಡ್ರೆ ತರಾಟೆ

ಜಲ ಬಜೆಟ್ ಬಗ್ಗೆ ಮಾಹಿತಿ ನೀಡದ ಅಧಿಕಾರಿಗಳಿಗೆ  ಸಚಿವ ಈಶ್ವರ್ ಖಂಡ್ರೆ ತರಾಟೆ

ಜಲ ಬಜೆಟ್ ಬಗ್ಗೆ ಮಾಹಿತಿ ನೀಡದ ಅಧಿಕಾರಿಗಳಿಗೆ ಸಚಿವ ಈಶ್ವರ್ ಖಂಡ್ರೆ ತರಾಟೆ

ಮೈಸೂರು, ನವೆಂಬರ್,4,2026 (www.justkannada.in):  ಜಲ ಆಯವ್ಯಯ (ವಾಟರ್ ಬಜೆಟಿಂಗ್) ಎಂದರೆ ಏನು? ಈ ಪ್ರಶ್ನೆ ಕೇಳಿದ್ದು ಬೇರೆ ಯಾರೋ ಅಲ್ಲ. ಸ್ವತಃ ಗ್ರಾಮೀಣಾಭಿವೃದ್ಧಿ  ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ. ಆದರೆ ಈ ಪ್ರಶ್ನಗೆ ಉತ್ತರ ನೀಡಲಾಗದೆ ಜಲ ಜೀವನ ಮಿಷನ್ ಎಂಜಿನಿಯರುಗಳು ತಬ್ಬಿಬ್ಬಾಗಿ ತಲೆ ತಗ್ಗಿಸಿ ನಿಂತ ಘಟನೆ ಇಂದು ನಡೆಯಿತು.

ಈ ಘಟನೆ ನಡೆದಿದ್ದು ಮೈಸೂರು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ. ಎಂಜಿನಿಯರುಗಳ ಮಾಹಿತಿ ಕೊರತೆಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಇಷ್ಟೂ ಅರಿವಿಲ್ಲದೆ ಕೆಲಸ ಹೇಗೆ ಮಾಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.

ನಂತರ ಎಂಜಿನಿಯರುಗಳಿಗೆ ಪಾಠ ಮಾಡಿದ ಈಶ್ವರ ಖಂಡ್ರೆ, ಯಾವ ಗ್ರಾಮದಲ್ಲಿ ಎಷ್ಟು ಕೊಳವೆ ಬಾವಿ ಇದೆ, ತೆರೆದ  ಬಾವಿ ಇದೆ, ಅಂತರ್ಜಲ ಮಟ್ಟ ಯಾವ ಹಂತದಲ್ಲಿದೆ. ಅನ್ಯ ಜಲಮೂಲಗಳು ಇವೆಯೇ. ಜನಸಂಖ್ಯೆಯ ಹೆಚ್ಚಳಕ್ಕೆ ಅನುಗುಣವಾಗಿ ಮುಂದಿನ 1 ವರ್ಷಕ್ಕೆ ಎಷ್ಟು ನೀರಿನ ಅಗತ್ಯವಿದೆ, 5 ವರ್ಷಕ್ಕೆ ಎಷ್ಟು ನೀರು ಬೇಕು. ಶಾಲೆ, ಕಾಲೇಜು, ಅಂಗನವಾಡಿ, ಆಸ್ಪತ್ರೆ, ಕೈಗಾರಿಕೆಗಳಿಗೆ ಎಷ್ಟು ನೀರಿನ ಅಗತ್ಯವಿದೆ. ಮುಂದಿನ 30 ವರ್ಷದಲ್ಲಿ ಮೇಲ್ಮೈ ನೀರಿನಿಂದ ಗ್ರಾಮೀಣ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸಲು ಸಾಧ್ಯವೇ ಎಂದು ಅಂದಾಜು ಮಾಡಿ  ಯೋಜನೆ ರೂಪಿಸುವುದೇ ಜಲ ಬಜೆಟಿಂಗ್ ಎಂದು ವಿವರಿಸಿದರು. ಜಲ ಬಜೆಟ್ ಬಗ್ಗೆ ಮಾಹಿತಿ ನೀಡದ ಅಧಿಕಾರಿಗಳಿಗೆ ಸಚಿವ ಈಶ್ವರ್ ಖಂಡ್ರೆ ತರಾಟೆ

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮತ್ತು ಏಕ ಗ್ರಾಮ ಕುಡಿಯುವ ನೀರಿನ ಯೋಜನೆಗೆ ರಾಜ್ಯದಲ್ಲಿ ಸರ್ಕಾರ ಒಟ್ಟಾರೆ 67 ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದೆ. ಆದರೂ ನೀರು ಬಾರದಿದ್ದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.Minister jk02_new jk02 new

ಉಪ ಕಾರ್ಯದರ್ಶಿಗಳು ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಜಲ ಜೀವನ ಮಿಷನ್ ಯೋಜನೆಯಡಿ ಎಲ್ಲ ಗ್ರಾಮಗಳಿಗೆ, ಗ್ರಾಮದ ಕೊನೆಯ ಮನೆಗೂ ನೀರು ತಲುಪುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಸೂಚಿಸಿದರು.

 

English Summary
Title

Minister Eshwar Khandre reprimands officials for failing to provide information on the water budget.

Short Description
What is 'water budgeting'? This question was posed by none other than the Minister for Rural Development and Panchayat Raj, Eshwar B. Khandre himself. However, the engineers of the 'Jal Jeevan Mission' were left flummoxed and stood with their heads bowed, unable to provide an answer. This incident took place during a progress review meeting held at the Mysuru Zilla Panchayat hall. Expressing his displeasure over the engineers' lack of knowledge, the Minister reprimanded them, asking, "How do you carry out your work without even this basic understanding?"
Keywords
Minister, Eshwar Khandre, reprimands, officials, failing, provide, information, water budget.