Saturday, October 31, 2026

Dasara Wishes

Happy Dasara
Home Front Page ರೈತರಿಗೆ ಹಾಲಿನ ದರ ವಿಚಾರದಲ್ಲಿ ನಮ್ಮ ಸರ್ಕಾರ ಐತಿಹಾಸಿಕ ನಿರ್ಧಾರ, ಬಿಜೆಪಿಯಿಂದ ಕೇವಲ ರಾಜಕಾರಣ- ಸಚಿವ...

ರೈತರಿಗೆ ಹಾಲಿನ ದರ ವಿಚಾರದಲ್ಲಿ ನಮ್ಮ ಸರ್ಕಾರ ಐತಿಹಾಸಿಕ ನಿರ್ಧಾರ, ಬಿಜೆಪಿಯಿಂದ ಕೇವಲ ರಾಜಕಾರಣ- ಸಚಿವ ಮಧು ಬಂಗಾರಪ್ಪ

ರೈತರಿಗೆ ಹಾಲಿನ ದರ ವಿಚಾರದಲ್ಲಿ ನಮ್ಮ ಸರ್ಕಾರ ಐತಿಹಾಸಿಕ ನಿರ್ಧಾರ, ಬಿಜೆಪಿಯಿಂದ ಕೇವಲ ರಾಜಕಾರಣ- ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ, ಅಕ್ಟೊಬರ್,31,2026 (www.justkannada.in): ಹಾಲಿನ ದರ ಏರಿಕೆ ವಿಚಾರದಲ್ಲಿ ಗ್ರಾಹಕರನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜಕಾರಣ ಮಾಡುತ್ತಿದೆ. ನಮ್ಮ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್  ನೇತೃತ್ವದ ಸರ್ಕಾರ ಪ್ರತಿ ಲೀಟರ್ ಹಾಲಿಗೆ 8 ರೂ. ಹೆಚ್ಚಳ ಮಾಡಿ, ಅದರಲ್ಲಿ 7 ರೂ.ಗಳನ್ನು ರೈತರಿಗೆ ನೀಡುವ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಹಾಗಾದರೆ ಸರ್ಕಾರ ಅನ್ನದಾತರಿಗೆ ಸಹಾಯ ಮಾಡಬಾರದೇ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದರು.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಶಿವಮೊಗ್ಗದ ನವಲೆಯ ಕೃಷಿ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಕೃಷಿ ಮತ್ತು ತೋಟಗಾರಿಕೆ ಮೇಳ-2026ರಲ್ಲಿ ಭಾಗವಹಿಸಿ ಸಚಿವ ಮಧು ಬಂಗಾರಪ್ಪ ಅವರು ಮಾತನಾಡಿದರು.

ಬಿಜೆಪಿಯವರಿಗೆ ವಿರೋಧಿಸುವುದೇ ರಾಜಕಾರಣವಾಗಿದೆ. ಆದರೆ, ನಮ್ಮ ಸರ್ಕಾರ ರೈತರಿಗೆ ನೆರವಾಗುವ ನಿರ್ಧಾರ ಕೈಗೊಂಡಿರುವ ಬಗ್ಗೆ ಹೆಮ್ಮೆಯಿದೆ. ಈ ಹಿಂದೆ ಯಾರೂ ಇಂತಹ ತೀರ್ಮಾನ ಕೈಗೊಂಡಿರಲಿಲ್ಲ. ಬರಗಾಲದ ಸಂದರ್ಭದಲ್ಲಿ ರೈತರ ಆರ್ಥಿಕ ಸ್ಥಿತಿ ಸುಧಾರಿಸುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಬಂಗಾರಪ್ಪ ಅವರ ದೂರದೃಷ್ಟಿಯಿಂದ ಶಿವಮೊಗ್ಗದಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ

1990ರಲ್ಲಿ ತಮ್ಮ ತಂದೆ ಹಾಗೂ ಅಂದಿನ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಮಲೆನಾಡು ಭಾಗದ ರೈತರ ಮಕ್ಕಳು ಕೃಷಿ ಶಿಕ್ಷಣವನ್ನು ವೈಜ್ಞಾನಿಕವಾಗಿ ಕಲಿಯಬೇಕು ಎಂಬ ದೂರದೃಷ್ಟಿಯಿಂದ ಶಿವಮೊಗ್ಗದಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಿದರು. ಈ ಮೂಲಕ ಕೃಷಿ ಕ್ಷೇತ್ರದಲ್ಲಿ ವೈಜ್ಞಾನಿಕ ಅಧ್ಯಯನ ಮತ್ತು ಸಂಶೋಧನೆಗೆ ಹೆಚ್ಚಿನ ಅವಕಾಶ ಕಲ್ಪಿಸಿದರು ಎಂದರು.

ಕೃಷಿ ವಿಶ್ವವಿದ್ಯಾಲಯದ ಸ್ಥಾಪನೆಗೆ ಹಿರಿಯ ಮುತ್ಸದ್ದಿ ನಾಯಕ ಕಾಗೋಡು ತಿಮ್ಮಪ್ಪ ಅವರ ಕೊಡುಗೆಯನ್ನೂ ಸ್ಮರಿಸಬೇಕು. ಇರುವಕ್ಕಿಯಲ್ಲಿ 787 ಎಕರೆ ಜಮೀನು ಮಂಜೂರು ಮಾಡಿಸಿ, ಮೊದಲ ಹಂತದಲ್ಲಿ 150 ಕೋಟಿ ರೂ. ಅನುದಾನ ಬಿಡುಗಡೆಗೊಳಿಸುವ ಮೂಲಕ ವಿಶ್ವವಿದ್ಯಾಲಯದ ಮುಖ್ಯ ಆವರಣ ಸ್ಥಾಪನೆಗೆ ಅಡಿಪಾಯ ಹಾಕಿದರು ಎಂದು ತಿಳಿಸಿದರು.ರೈತರಿಗೆ ಹಾಲಿನ ದರ ವಿಚಾರದಲ್ಲಿ ನಮ್ಮ ಸರ್ಕಾರ ಐತಿಹಾಸಿಕ ನಿರ್ಧಾರ, ಬಿಜೆಪಿಯಿಂದ ಕೇವಲ ರಾಜಕಾರಣ- ಸಚಿವ ಮಧು ಬಂಗಾರಪ್ಪ

ಉಚಿತ ಪಂಪ್‌ಸೆಟ್ ಯೋಜನೆಯಿಂದ ಅಡಕೆ ಕೃಷಿ ವಿಸ್ತರಣೆ

ಕೃಷಿ ಮೇಳದ ಸಂದರ್ಭದಲ್ಲಿ ರಾಜ್ಯದ ಕೃಷಿ ಬೆಳವಣಿಗೆಯ ಕುರಿತು ಮಾತನಾಡಿದ ಸಚಿವರು, 1990ರಲ್ಲಿ ಸುಮಾರು 18 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿತ್ತು. ತಮ್ಮ ತಂದೆ ಎಸ್. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಉಚಿತ ಪಂಪ್‌ಸೆಟ್ ಯೋಜನೆ ಜಾರಿಗೊಳಿಸಿದರು. ಇದರಿಂದ ನೀರಾವರಿ ಸೌಲಭ್ಯಕ್ಕೆ ಉತ್ತೇಜನ ದೊರೆತು, ಇಂದು ಅಡಕೆ ಕೃಷಿ ಸುಮಾರು 1.48 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಿಸಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಚಿವ ಕೆ.ಎಸ್. ಬಸವಂತಪ್ಪ, ವಿಶ್ವವಿದ್ಯಾಲಯದ ಕುಲಪತಿ ಡಾ. ಧನಂಜಯ ಎಂ.ವಿ., ಕುಲಸಚಿವ ಡಾ. ಶಾಮರಾವ್ ಜಹಾಗೀರದಾರ್, ಸೂಡಾ ಅಧ್ಯಕ್ಷ ಸಿ.ಜೆ. ಮಧುಸೂದನ್ ಸೇರಿದಂತೆ ವಿಶ್ವವಿದ್ಯಾಲಯದ ಬೋಧಕ ವರ್ಗದವರು ಉಪಸ್ಥಿತರಿದ್ದರು.

Our government, historic decision,  milk prices, farmers, Minister, Madhu Bangarappa

English Summary
Title

Our government has taken a historic decision regarding milk prices for farmers; the BJP is merely playing politics – Minister Madhu Bangarappa

Short Description
The BJP is playing politics over the issue of the milk price hike by using consumers as a front. The government, led by Chief Minister D.K. Shivakumar, has taken a significant decision to increase the price of milk by Rs. 8 per litre, with Rs. 7 of that amount going directly to the farmers. "Should the government not assist those who feed the nation?" questioned Madhu Bangarappa, the Minister in-charge of Shivamogga district and Minister for School Education and Literacy. Minister Madhu Bangarappa made these remarks while participating in the 'Agriculture and Horticulture Fair-2026,' organized on the premises of the College of Agriculture in Navale, Shivamogga, in collaboration with the Keladi Shivappa Nayaka University of Agricultural and Horticultural Sciences.
Keywords
Our government, historic decision, milk prices, farmers, Minister, Madhu Bangarappa