Wednesday, October 21, 2026

Dasara Wishes

Happy Dasara
Home Uncategorized ಮೈಸೂರು ದಸರಾ ವರದಿಗಾರಿಕೆಗೆ ಪೊಲೀಸರಿಂದ ಅಡ್ಡಿ: ಎಂಎಲ್‌ಸಿ ಕೆ.ಶಿವಕುಮಾರ್‌, ಪತ್ರಕರ್ತರ ಸಂಘ ಖಂಡನೆ

ಮೈಸೂರು ದಸರಾ ವರದಿಗಾರಿಕೆಗೆ ಪೊಲೀಸರಿಂದ ಅಡ್ಡಿ: ಎಂಎಲ್‌ಸಿ ಕೆ.ಶಿವಕುಮಾರ್‌, ಪತ್ರಕರ್ತರ ಸಂಘ ಖಂಡನೆ

ಮೈಸೂರು ದಸರಾ ವರದಿಗಾರಿಕೆಗೆ ಪೊಲೀಸರಿಂದ ಅಡ್ಡಿ: ಎಂಎಲ್‌ಸಿ ಕೆ.ಶಿವಕುಮಾರ್‌, ಪತ್ರಕರ್ತರ ಸಂಘ ಖಂಡನೆ

 

ಮೈಸೂರು, ಅ.21, 2026: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯ ವರದಿಗಾಗಿ ತೆರಳಿದ್ದ ಪತ್ರಕರ್ತರಿಗೆ ಅಧಿಕೃತ ಮೀಡಿಯಾ ಪಾಸ್‌ ಇದ್ದರೂ ಪ್ರವೇಶ ನಿರಾಕರಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಪೊಲೀಸ್ ಅಧಿಕಾರಿಗಳ ವರ್ತನೆಗೆ ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್‌ ಹಾಗೂ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ಬ್ರಹ್ಮಪುರಿ ಗೇಟ್‌ನಲ್ಲಿ ಪತ್ರಕರ್ತರನ್ನು ತಡೆದು, ಪಾಸ್‌ ನಕಲಿ ಎಂದು ಆರೋಪಿಸಿ ಅನುಚಿತವಾಗಿ ವರ್ತಿಸಿದ್ದಲ್ಲದೆ, ಹಿರಿಯ ಪತ್ರಕರ್ತರ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ. ಮಾಧ್ಯಮ ಗ್ಯಾಲರಿಗೆ ಪ್ರವೇಶ ನಿರ್ಬಂಧಿಸಿದ್ದರಿಂದ ಪತ್ರಕರ್ತರಿಗೆ ನಿಗದಿತ ಸಮಯದಲ್ಲಿ ವರದಿ ಮಾಡಲು ತೊಂದರೆಯಾಗಿದೆ ಎಂದು ತಿಳಿಸಲಾಗಿದೆ.

ಘಟನೆಯನ್ನು ಖಂಡಿಸಿರುವ ಎಂಎಲ್‌ಸಿ ಕೆ.ಶಿವಕುಮಾರ್‌, ಕರ್ತವ್ಯಕ್ಕೆ ಅಡ್ಡಿಪಡಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿ ಮತ್ತು ಐಜಿಪಿ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಇದೇ ವೇಳೆ, ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಮತ್ತು ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಅವರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ. ಈ ವಿಷಯವನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಗಮನಕ್ಕೂ ತರಲಾಗಿದೆ.

KEY WORDS:

Mysuru Dasara 2026, Mysuru Dasara Jamboo Savari, K. Shivakumar MLC, Mysuru journalists, Police obstruction of journalists, Mysuru District Journalists’ Association, Dasara media coverage, Brahmapuri Gate incident

ಮೈಸೂರು ದಸರಾ ವರದಿಗಾರಿಕೆಗೆ ಪೊಲೀಸರಿಂದ ಅಡ್ಡಿ: ಎಂಎಲ್‌ಸಿ ಕೆ.ಶಿವಕುಮಾರ್‌, ಪತ್ರಕರ್ತರ ಸಂಘ ಖಂಡನೆ

English Summary
Title

Mysuru Dasara 2026: MLC K. Shivakumar and Journalists' Association Condemn Police Obstruction

Short Description
Mysuru, October 21, 2026: MLC K. Shivakumar and the Mysuru District Journalists' Association have condemned alleged police obstruction of journalists covering the world-famous Mysuru Dasara Jamboo Savari procession. Despite carrying official media passes, reporters were reportedly denied entry at Brahmapuri Gate, accused of carrying fake passes and subjected to inappropriate behaviour. An alleged attempt to assault a senior journalist and restrictions on access to the media gallery reportedly disrupted timely news coverage.
Keywords
Mysuru Dasara 2026, Mysuru Dasara Jamboo Savari, K. Shivakumar MLC, Mysuru journalists, Police obstruction of journalists, Mysuru District Journalists' Association, Dasara media coverage, Brahmapuri Gate incident