ಮೈಸೂರು,ಅಕ್ಟೋಬರ್,12,2026 (www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಮಹೋತ್ಸವದ ಸಂಭ್ರಮ ಶುರುವಾಗಿದ್ದು ಈ ಮಧ್ಯೆ ಯುವ ದಸರಾ ಉದ್ಘಾಟನೆಗೆ ಆಗಮಿಸಿರುವ ಬಹುಭಾಷಾ ನಟ ಪ್ರಭುದೇವ್ ಅವರು ತಾಯಿ ಸುತ್ತೂರು ಮಠಕ್ಕೆ ಭೇಟಿದ್ದಾರೆ.
ನಟ ಪ್ರಭುದೇವ್ ಅವರು ತಾಯಿಯ ಜೊತೆಯಲ್ಲಿ ಆಗಮಿಸಿ, ಸುತ್ತೂರು ಮಠಕ್ಕೆ ಭೇಟಿ ನೀಡಿ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.
ನಿನ್ನೆ ಮೈಸೂರಿಗೆ ಆಗಮಿಸಿರುವ ನಟ ಪ್ರಭುದೇವ್ ಮೈಸೂರಿನಲ್ಲೇ ವಾಸ್ತವ್ಯ ಹೂಡಿದ್ದು ನಾಳೆ ಯುವ ದಸರಾವನ್ನು ಉದ್ಘಾಟಿಸಲಿದ್ದಾರೆ. 






