Tuesday, October 6, 2026

BDA Apartments

immense respect BDA JK_Adv BDA Adv
Home Front Page ಕನ್ನಡ ಕೈಬರಹ ಉಳಿಸಲು ಹಿರಿಯ ಲೇಖಕ ರಘುಪತಿ ತಾಮ್ಹನ್ ಕರ್ ಸಲಹೆ

ಕನ್ನಡ ಕೈಬರಹ ಉಳಿಸಲು ಹಿರಿಯ ಲೇಖಕ ರಘುಪತಿ ತಾಮ್ಹನ್ ಕರ್ ಸಲಹೆ

ಮೈಸೂರು,ಅಕ್ಟೋಬರ್,6,2026 (www.justkannada.in):  ಇಂದಿನ ಮಕ್ಕಳು ಕನ್ನಡವನ್ನು ಇಂಗ್ಲಿಷಿನಲ್ಲಿ ಬರೆಯುತ್ತಿದ್ದಾರೆ. ಇದಕ್ಕಾಗಿ ಕನ್ನಡ ಕೈಬರಹ ಉಳಿಸಬೇಕು ಎಂದು ಹಿರಿಯ ಲೇಖಕ ರಘುಪತಿ ತಾಮ್ಹನ್ ಕರ್ ಸಲಹೆ ನೀಡಿದರು.

ದೆಹಲಿಯ ಕರ್ನಾಟಕ ಸಂಘದಲ್ಲಿ ಜನಕಪುರಿ ಕನ್ನಡ ಕೂಟದ ಸುವರ್ಣ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಹಿರಿಯ ಲೇಖಕ ರಘುಪತಿ ತಾಮ್ಹನ್ ಕರ್ ಅವರು ಮಾತನಾಡಿದರು.

ಕನ್ನಡ ಕೈಬರಹ ಉಳಿಸುವ ಅಭಿಯಾನದ ಅಂಗವಾಗಿ ಕರ್ನಾಟಕ ರಾಜ್ಯದ ವಿವಿಧೆಡೆ ಕನ್ನಡ ಸರ್ಕಾರಿ ಶಾಲೆಗಳಿಗೆ ತೆರಳಿ 6,500 ವಿದ್ಯಾರ್ಥಿಗಳಿಗೆ ನೂರು ಪುಟಗಳ ಖಾಲಿ ಪುಸ್ತಕ ನೀಡಿರುವೆ. 4 ವರ್ಷಗಳವರೆಗೆ ದೆಹಲಿಯ ಸಿಂಡಿಕೇಟ್ ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದೆ ಜೊತೆಗೆ ಜನಕಪುರಿ ಕನ್ನಡ ಕೂಟದ ಕಾರ್ಯದರ್ಶಿಯಾಗಿದ್ದೆ. ಆಗ ಜನಕಪುರಿ ಕನ್ನಡ ಕೂಟದ ಬೆಳ್ಳಿಹಬ್ಬ ಸಮಾರಂಭದ ಸಂಚಾಲಕನಾಗಿ ಕಾರ್ಯ ನಿರ್ವಹಿಸಿದೆ ಎಂದು ಸ್ಮರಿಸಿದರು.Veteran writer tam

ದೆಹಲಿಯಲ್ಲಿರುವ‌ ಕನ್ನಡಿಗರು ಅನೇಕ ವಿವಿಧ ಸಂಘ, ಕೂಟ, ಬಳಗ ಕಟ್ಟಿಕೊಂಡಿದ್ದಾರೆ. ಇದರಿಂದ ಒಂದಾಗಲು ಸಾಧ್ಯವಾಗುತ್ತದೆ. ಆದರೆ ಮೊದಲಿನಷ್ಟು ಕನ್ನಡಿಗರು ಸೇರುತ್ತಿಲ್ಲ. ಕನ್ನಡದಿಂದಲೇ ದೆಹಲಿಯಲ್ಲಿ ಕನ್ನಡಿಗರು ಒಂದಾಗಲು ಸಾಧ್ಯವಾಗಿತ್ತದೆ. ಕನ್ನಡವೇ ನಿಮ್ಮನ್ನು ಇಲ್ಲಿ ಉಳಿಸಿತು ಎಂದರು.

ದೆಹಲಿಯಲ್ಲಿ ನಮ್ಮ ಮನೆಯನ್ನೇ ರಂಗಭೂಮಿಯಾಗಿಸಿ ತಾಲೀಮು ನಡೆಸಿ ಪ್ರದರ್ಶಿಸಿದ ಡಾ.ಚಂದ್ರಶೇಖರ ಕಂಬಾರರ ‘ಪುಷ್ಪರಾಣಿ’ ನಾಟಕದ ಅನುಭವ, ಜನಕಪುರಿ ಮಹಿಳಾ ಮಂಡಳಿ ಪ್ರಥಮ ಬಹುಮಾನ ಗೆದ್ದ ಕ್ಷಣಗಳನ್ನು ಅವರು ನೆನೆದರು.

ನಂತರ ಅವರನ್ನು ಹಾಗೂ ಅವರ ಪತ್ನಿ ಮತ್ತು ಜನಕಪುರಿ ಕನ್ನಡ ಕೂಟದ ಮಹಿಳಾ ಮಂಡಳದ ಸಂಚಾಲಕಿಯಾಗಿದ್ದ ಮಧುರಾ ತಾಮ್ಹನ್ ಕರ್ ಅವರನ್ನು ಸನ್ಮಾನಿಸಲಾಯಿತು.Veteran writer jk02_new jk02 new

ಕಾರ್ಯಕ್ರಮದಲ್ಲಿ ದೆಹಲಿ ಕನ್ನಡ ಶಾಲೆಯ ಅಧ್ಯಕ್ಷ ಡಾ. ಅವನೀಂದ್ರನಾಥ್ ಅವರ ಮೂಲಕ ಮೂರು ಮಕ್ಕಳಿಗೆ ನೋಟ್ ಪುಸ್ತಕಗಳನ್ನು ರಘುಪತಿ ತಾಮ್ಹನ್ ಕರ್ ವಿತರಿಸಿದರು.ಕಾರ್ಯಕ್ರಮದ ಸ್ಥಳದಲ್ಲಿ ಜನಕಪುರಿ ಕನ್ನಡ ಕೂಟದ ಹಳೆಯ ಭಾವಚಿತ್ರ, ಪುಸ್ತಕ ಮತ್ತು ‘ದೆಹಲಿ ಕನ್ನಡಿಗ’, ‘ಅಭಿಮತ’ ಪತ್ರಿಕೆಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

 

English Summary
Title

Preserving Kannada Handwriting: Legacy of Writer Raghupati Tamhankar

Short Description
Veteran writer and editor Raghupati Tamhankar from Mysuru highlights the urgent need to protect traditional Kannada handwriting in our modern, digital era. While no formal government framework is credited directly to him, cultural advocates echo his literary vision by promoting beautiful Kannada script design (akshara jodu). To combat digital amnesia, key language preservation strategies focus on school-level calligraphy programs, local handwritten magazine contests, and converting classic authors' penmanship into digital Unicode fonts. Archiving these physical manuscripts safeguards the authentic tactile heritage of the Kannada language.
Keywords
Veteran writer, Raghupati Tamhankar, suggestion, preserve, Kannada handwriting.