ಬೆಂಗಳೂರು, ಅಕ್ಟೋಬರ್,5,2026 (www.justkannada.in): ಸಿಎಂ ಮೊನ್ನೆ ಡ್ರಾಮಾ ಮಾಡಿದ್ದಾರೆ. ಚುನಾವಣಾ ಆಯೋಗದ ಮೇಲೆ ಒತ್ತಡ ಹಾಕಿದ್ದಾರೆ. ಕೈ ನಾಯಕತ್ವ ನಡೆದುಕೊಂಡ ರೀತಿ ದೇಶದ ಇತಿಹಾಸದಲ್ಲಿ ಇದೇ ಮೊದಲು ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಟೀಕಿಸಿದರು.
ಇಂದು ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಚುನಾವಣಾ ಆಯೋಗದ ಮೇಲೆ ಒತ್ತಡ ಹಾಕುವ ಕೆಲಸ ಸಿಎಂ ಮಾಡಿದ್ದಾರೆ. ಫಾರ್ಮ್ 7 ನಲ್ಲಿ ಕೇಸ್ ಹಾಕಲು ಪೊಲೀಸರಿಗೆ ಅಧಿಕಾರ ಇಲ್ಲ. ಕೇಸ್ ಹಾಕಬೇಕಾದರೆ ಕೋರ್ಟ್ ಅನುಮತಿ ಬೇಕು. ಎಫ್ಐಆರ್ ದಾಖಲಿಸಲು ಬರುವುದಿಲ್ಲ ಅವಕಾಶ ಇಲ್ಲ. ಮಹಾನುಭಾವ ಗೃಹ ಸಚಿವರು ಪೊಲೀಸ್ ಇಲಾಖೆಯನ್ನ ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿದರು.
ಕೆಪಿಎಸ್ ಸಿ ಬಗ್ಗೆ ಈವರೆಗೆ ಒಂದು ಮಾತನಾಡಿಲ್ಲ ಎಲ್ಲದಕ್ಕೂ ಬಂದು ಮೈಕ್ ಮುಂದೆ ನಿಂತುಕೊಳ್ಳುತ್ತಾರೆ ಎಸ್ ಐಆರ್ ನಲ್ಲಿ ಭಾಗವಹಿಸಿರುವುದು ರಾಜ್ಯ ಸರ್ಕಾರದ ಅಧಿಕಾರಿಗಳು. ಈ ಗೂಂಡಾ ಸರ್ಕಾರದ ವಿರುದ್ದ ಕೆಲಸ ಮಾಡಲು ಅವರಿಗೆ ಈಗ ಅವಕಾಶ ಇದೆಯಾ? ನಾವು ಚುನಾವಣೆ ಆಯೋಗಕ್ಕೆ ಸೌಮ್ಯ ರೀತಿಯಲ್ಲೇ ಮನವಿ ಮಾಡಿದ್ದೇವೆ ನಾವು ಈಗ ಒತ್ತಡ ಹಾಕಿ ನಾವು ಸಹ ಇಲ್ಲಿ ಕೂರಬಹುದು ಎಂದು ಟಾಂಗ್ ಕೊಟ್ಟರು.






