Saturday, September 26, 2026

BDA Apartments

Devarasanahalli BDA JK_Adv BDA Adv
Home Crime CRIME NEWS; ದೇವರಸನಹಳ್ಳಿಯಲ್ಲಿ ಮನೆಗೆ ನುಗ್ಗಿ ಹಲ್ಲೆ ಆರೋಪ: ಇಬ್ಬರ ವಿರುದ್ಧ ದೂರು

CRIME NEWS; ದೇವರಸನಹಳ್ಳಿಯಲ್ಲಿ ಮನೆಗೆ ನುಗ್ಗಿ ಹಲ್ಲೆ ಆರೋಪ: ಇಬ್ಬರ ವಿರುದ್ಧ ದೂರು

 

ಮೈಸೂರು, ಸೆ.26, 2026: ನಂಜನಗೂಡು ತಾಲೂಕಿನ ದೇವರಸನಹಳ್ಳಿ ಗ್ರಾಮದಲ್ಲಿ ಮನೆಗೆ ಏಕಾಏಕಿ ನುಗ್ಗಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ, ಮೊಬೈಲ್ ಕಿತ್ತುಕೊಂಡು ಜೀವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ಗ್ರಾಮದ ಇಬ್ಬರ ವಿರುದ್ಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದೇವರಸನಹಳ್ಳಿ ಗ್ರಾಮದ ಎಂ. ಲೋಕೇಶ್ ಅವರು ಸೆ.24ರಂದು ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Devarasanahalli jk02_new jk02 new

ದೂರಿನ ಪ್ರಕಾರ, ಸೆ.17ರಂದು ಬೆಳಗ್ಗೆ 8.10ರ ಸುಮಾರಿಗೆ ಗ್ರಾಮದ ರಾಜು, ಮಂಜು ಹಾಗೂ 8-10 ಮಂದಿ ಮನೆಗೆ ನುಗ್ಗಿ, ಅಂಗಿಯ ಕಾಲರ್ ಹಿಡಿದು ಎಳೆದಾಡಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಮೊಬೈಲ್ ಮೂಲಕ ಪೊಲೀಸರಿಗೆ ಕರೆ ಮಾಡಲು ಮುಂದಾದಾಗ ಮಂಜು ಮೊಬೈಲ್ ಕಿತ್ತುಕೊಂಡಿದ್ದಾನೆ ಎಂದು ಲೋಕೇಶ್ ಆರೋಪಿಸಿದ್ದಾರೆ.

ರಾಜು ಹಾಗೂ ಮಂಜು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಲ್ಲದೆ, ನಂತರ ಗ್ರಾಮಸ್ಥರ ಮಧ್ಯಸ್ಥಿಕೆಯಲ್ಲಿ ವಿಚಾರ ಬಗೆಹರಿಸುವುದಾಗಿ ಹೇಳಿ ತಮ್ಮನ್ನು ಗ್ರಾಮದ ಗರಡಿ ಮನೆಗೆ ಕರೆದೊಯ್ಯಲಾಗಿತ್ತು. ಅಲ್ಲಿಯೂ ಮಂಜು ಹಲ್ಲೆಗೆ ಮುಂದಾಗಿದ್ದು, ಸ್ಥಳದಲ್ಲಿದ್ದ 15-20 ಮಂದಿ ಗ್ರಾಮಸ್ಥರು ತಡೆದು ಅನಾಹುತ ತಪ್ಪಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

“ಪೊಲೀಸರಿಗೆ ದೂರು ನೀಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಬೆದರಿಸಿ ಬಳಿಕ ಮೊಬೈಲ್ ಹಿಂತಿರುಗಿಸಿ ಕಳುಹಿಸಲಾಗಿದೆ ಎಂದು ಲೋಕೇಶ್ ಆರೋಪಿಸಿದ್ದಾರೆ.

assault case police police 1

ಹಿಂದಿನ ದೂರುಗಳ ಉಲ್ಲೇಖ:

ರಾಜು ವಿರುದ್ಧ ಈ ಹಿಂದೆ ಕೂಡ ಜಮೀನು ವಿಚಾರದಲ್ಲಿ ನಿಂದನೆ ಹಾಗೂ ಜೀವ ಬೆದರಿಕೆ ಆರೋಪಿಸಿ ದೂರು ನೀಡಿದ್ದಾಗಿ ಲೋಕೇಶ್ ತಿಳಿಸಿದ್ದಾರೆ. ಏಪ್ರಿಲ್ 27ರಂದು ಜಮೀನಿನ ಬಳಿ ರಾಜು ಹಲ್ಲೆಗೆ ಮುಂದಾಗಿ ಜೀವ ಬೆದರಿಕೆ ಹಾಕಿದ್ದ ಘಟನೆಯ ದೃಶ್ಯಾವಳಿಗಳನ್ನೂ ಪೊಲೀಸರಿಗೆ ನೀಡಿದ್ದಾಗಿ ಹೇಳಿದ್ದಾರೆ.

ಇದಲ್ಲದೆ, ಸರ್ಕಾರಿ ಒತ್ತುವರಿ ತೆರವು ಕಾರ್ಯಾಚರಣೆ ಹಾಗೂ ಜಮೀನು ಸರ್ವೆ ಸಂದರ್ಭದಲ್ಲಿ ಅಧಿಕಾರಿಗಳ ಕರ್ತವ್ಯಕ್ಕೆ ರಾಜು ಮತ್ತು ಮಂಜು ಅಡ್ಡಿಪಡಿಸಿದ್ದಾರೆ ಎಂಬ ಆರೋಪವನ್ನೂ ದೂರಿನಲ್ಲಿ ಮಾಡಲಾಗಿದೆ. ಸೆ.9ರಂದು ಕಬಿನಿ ನಾಲಾ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದನ್ನೂ ಲೋಕೇಶ್ ಉಲ್ಲೇಖಿಸಿದ್ದಾರೆ.

ತಮ್ಮ ಕುಟುಂಬಕ್ಕೆ ನಿರಂತರ ಬೆದರಿಕೆ ಇರುವುದರಿಂದ ಜಮೀನಿಗೆ ತೆರಳಲು ಭಯವಾಗುತ್ತಿದೆ. ವಯೋವೃದ್ಧ ತಾಯಿಯವರಿಗೂ ಆತಂಕ ಉಂಟಾಗಿದೆ. ಗ್ರಾಮದಲ್ಲಿ ಪೊಲೀಸ್ ಬೀಟ್ ವ್ಯವಸ್ಥೆ ಮಾಡಿ, ತಮ್ಮ ಹಾಗೂ ತಾಯಿಯ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದು ಲೋಕೇಶ್ ಪೊಲೀಸರನ್ನು ಒತ್ತಾಯಿಸಿದ್ದಾರೆ.

ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದ ತಿಳಿದುಬರಬೇಕಿದೆ.

KEY WORDS:

Devarasanahalli, assault case, Nanjangud, house trespass, Nanjangud Rural Police Station, Mysuru crime news, assault and life threat. mobile phone snatching, Nanjangud police investigation

Nanjangud water pipes

English Summary
Title

Attack Allegation in Devarasanahalli: Two Booked for House Trespass, Assault and Threats in Nanjangud

Short Description
Mysuru, Sept. 26, 2026: A complaint has been registered against two persons at Nanjangud Rural Police Station for allegedly trespassing into a house in Devarasanahalli village, assaulting a resident, snatching his mobile phone and issuing life threats. The complaint was filed by M. Lokesh of Devarasanahalli on September 24. Police have registered a case and initiated an investigation into the incident.
Keywords
Devarasanahalli, assault case, Nanjangud, house trespass, Nanjangud Rural Police Station, Mysuru crime news, assault and life threat. mobile phone snatching, Nanjangud police investigation